ಯಾತ್ರಿಕರಿಗೆ ಕಲಾ ಭೈರವ ಭಾವಚಿತ್ರ ನೀಡಿ ಶುಭ ಹಾರೈಕೆ

 

ಕಲಬುರ್ಗಿ,ಜೂ.೮- ನಗರದ ಬಸವೇಶ್ವರ ಆಸ್ಪತ್ರೆಯ ಎದುರುಗಡೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ (ಈಶ್ವರ) ದೇವಾಸ್ಥಾನದ ಆವರಣದಲ್ಲಿ ಸೋಮವಾರ ವಿಶೇಷ ದಿನ ಅದಿಕ ಕಲಾಷ್ಟಮಿ ಪ್ರಯುಕ್ತ ದೇವಾಸ್ಥಾನಗಳ ದರ್ಶನಗಳಿಂದ ಕಾಲಭೈರವನ ಕೃಪೆಯಿಂದ ಭಕ್ತರ ಕಷ್ಟಗಳು ದೂರವಾಗುತ್ತವೆ ಎಂಬ ಆಗಾಧ ನಂಬಿಕೆ ವಿಶ್ವಾಸ ಹೊಂದಿರುವ ವಿದ್ಯಾನಗರ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಅಧ್ಯಕ್ಷೆ ರತ್ನಮ್ಮ ನಿಂಬೂರ್ ಹಾಗೂ ಪದಾಧಿಕಾರಿಗಳು ದೇವಾಸ್ಥಾನಗಳ ದರ್ಶನಕ್ಕಾಗಿ ಪ್ರವಾಸಕ್ಕೆ ಹೊರಟ ಯಾತ್ರಿಕರಿಗೆ ಸಾಮಾಜಿಕ ಮತ್ತು ಧಾರ್ಮಿಕ ಸೇವಾ ಸಂಸ್ಥೆಯಾದ ಅಂಡಗಿ ಪ್ರತಿಷ್ಠಾನ ಟಂಗಳಿ ಅಧ್ಯಕ್ಷ ಶಿವರಾಜ್ ಅಂಡಗಿ ಅವರು ಕಲಾಭೈರವನ ಭಾವಚಿತ್ರ ಕೊಟ್ಟು ಪ್ರವಾಸ ಯಶಸ್ವಿಯಾಗಲೆಂದು ಹಾರೈಸಿದರು.

ಅಕ್ಕಮಹಾದೇವಿಯ ಮಹಿಳಾ ಟ್ರಸ್ಟಿನ ಪದಾಧಿಕಾರಿಗಳಾದ ವಿಜಯಲಕ್ಷಿö್ಮ ರಟಕಲ್, ರಾಜೇಶ್ರೀ ಕಂಠಿ, ತಾರಾ ಪಾಟೀಲ್, ಸುರೇಶ್ ಯಾದಗಿರ, ರೇಖಾ ಅಂಡಗಿ, ಶ್ರೀದೇವಿ ತಂಬಾಕೆ, ನಾಗರತ್ನ ಮುಗಳಿ, ಅರುಣಾ ಸಂಗಶೆಟ್ಟಿ, ಶಾಂತಾ ಶಿಕೇದ್, ಉಮಾ, ಸುಜಾತಾ, ಮಲ್ಲಮ್ಮ, ನಾಗವೇಣಿ, ಸುವರ್ಣಾ ಮುಂತಾದವರು ಉಪಸ್ಥಿತರಿದ್ದರು.

ಅಧಿಕ ಮಾಸದ ಪ್ರಯುಕ್ತ ಬಾದಾಮಿಯ ಬನಶಂಕರಿ, ಅಮ್ಮನ ಗುಡಿ, ಹಂಪಿಯ ವೀರುಪಾಕ್ಷಿಯ, ಐಹೊಳೆ ದುರ್ಗಾದೇವಿ, ಪಟ್ಟದ ಕಲ್ಲಿನ ರಾಣಿ ತ್ರಿಲೋಕ ಮಹಾದೇವಿ, ಕೊಪ್ಪಳದ ಗವಿಸಿದ್ದೇಶ್ವರ ಅಂಜನಾದ್ರಿಯ ಹನುಮಾನ್ ಮಹಾಕೂಟದ ಶಿವಲಿಂಗ ಮಹಾಕೂಟೇಶ್ವರ, ಶಿವಯೋಗ ಮಂದಿರದ ಶಿವಯೋಗೇಶ್ವರ, ಹೀಗೆ ಅನೇಕ ಪುರಾತನ ದೇವಾಸ್ಥಾನಗಳ ದರ್ಶನ, ಪಡೆಯಲಿದ್ದಾರೆಂದು ಶಿವರಾಜ್ ಅಂಡಗಿಯವರು ತಿಳಿಸಿದ್ದಾರೆ.

Share This Article
Leave a Comment