ಕಲಬುರ್ಗಿ, ಜೂ.೪- ಈ ತಿಂಗಳು ೧೮ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಎಐಸಿಸಿ ಅಧ್ಯಕ್ಷರು, ಹಿರಿಯ ಕಾಂಗ್ರೆಸ್ ಮುಖಂಡ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಪಕ್ಷದ ಅಭ್ಯರ್ಥಿಯಾಗಿ ಶುಕ್ರವಾರ ಮಧ್ಯಾಹ್ನ ೧೨ರಿಂದ ೧ ಗಂಟೆಯ ಅವಧಿಯಲ್ಲಿ ಬೆಂಗಳೂರಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸೇರಿದಂತೆ ಕಾಂಗ್ರೆಸ್ನ ಪ್ರಮುಖ ನಾಯಕರೆಲ್ಲರೂ ಉಪಸ್ಥಿತರಿದ್ದು ಖರ್ಗೆಯವರಿಗೆ ಸಾಥ್ ನೀಡಲಿದ್ದಾರೆಂದು ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಲ್ಲಂಪ್ರಭು ಪಾಟೀಲ್ ಅವರು ತಿಳಿಸಿದ್ದಾರೆ.
ಆ ದಿನ ಮಧ್ಯಾಹ್ನ ೧೨ರಿಂದ ೧ ಗಂಟೆಯೊಳಗೆ ಖರ್ಗೆಯವರು ನಾಮಪತ್ರ ಸಲ್ಲಿಸಲಿದ್ದಾರೆ. ಆದ ಕಾರಣ ರಾಜ್ಯಸಭೆ ಚುನಾವಣೆ ಮತದಾರರಾದ ರಾಜ್ಯದ ಶಾಸಕರು, ಸಚಿವರು ಎಲ್ಲರೂ ಮಧ್ಯಾಹ್ನ ೧೨ಕ್ಕೆ ವಿಧಾನಸೌಧಧಲ್ಲಿರುವ ಶಾಸಕಾಂಗ ಪಕ್ಷದ ಕಚೇರಿ ಸಭಾಂಗಣದಲ್ಲಿ ಹಾಜರಿರಬೇಕು. ಅಲ್ಲಿಂದಲೇ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ರಾಹುಲ್ ಗಾಂಧಿಯವರು ಹಾಗೂ ಇತರೆ ಎಲ್ಲಾ ಮುಖಂಡರೊAದಿಗೆ ನಾಮಪತ್ರ ಸಲ್ಲಿಕೆಗೆ ತೆರಳಲಿದ್ದಾರೆಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.