ಕಲಬುರ್ಗಿ, ಜೂ.೪- ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕಲಬುರಗಿ ನಗರದ ರಾಮಮಂದಿರ ಹಿಂದುಗಡೆ ಇರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಜೂನ್ ೭ರಿಂದ ೯ರವರೆಗೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಬದುಕಿನ ವಿವಿಧ ಘಟ್ಟಗಳು ಮತ್ತು ವಿಚಾರಧಾರೆಗಳನ್ನು ಕುರಿತು ಮೂರು ದಿನಗಳ ಚಿತ್ರಕಲಾ ಶಿಬಿರವನ್ನು ಹಮ್ಮಿಕೊಂಡಿದ್ದು, ಜೂನ್ ೭ ರಂದು ಬೆಳಿಗ್ಗೆ ೧೦.೦೦ ಗಂಟೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರು ಮತ್ತು ಹಿರಿಯ ಚಿತ್ರಕಲಾವಿದರಾದ ಬಸವರಾಜ ಜಾನೆ ಅವರು ಕಲಾಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ಶಿಬಿರದ ಸಂಚಾಲಕ ಡಾ. ಪರಶುರಾಮ್ ಪಿ., ಅವರು ತಿಳಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಸೂರ್ಯಕಾಂತ ಸುಜ್ಯಾತ ಅವರು ಸಂದೇಶ ಮಂಡನೆ ಮಾಡಲಿದ್ದಾರೆ. ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂದೆ ಅವರು ಅತಿಥಿಯಾಗಿ ಭಾಗವಹಿಸಲಿದ್ದಾರೆ. ವ್ಹಿ.ಬಿ. ಬಿರಾದಾರ್ ಕಲಾ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಲಾ ಶಿಬಿರದ ನಿರ್ದೇಶಕರಾದ ವ್ಹಿ.ಬಿ. ಬಿರಾದಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕಲಬುರ್ಗಿಯ ವ್ಹಿ. ಬಿರಾದಾರ್, ಬಾಬುರಾವ್ ಎಚ್., ಮಲ್ಲಿಕಾರ್ಜುನ್ ಕೋರಳ್ಳಿ, ಸೂರ್ಯಕಾಂತ್ ನಂದೂರ್, ಜಗದೀಶ್ ಕಾಂಬಳೆ, ಸೇಡಂದ ಸವಿತಾ ಕುಂಬಾರ್, ಶಹಾಬಾದ್ನ ಯಲ್ಲಪ್ಪ ಕಾಂಬಳೆ, ಆಳಂದ್ನ ಗೌತಮ್ ಈರಣ್ಣ, ಬೆಂಗಳೂರಿನ ಶಿವಾನಂದ್ ಬಸವಂತಪ್ಪ, ವಿಜಯಪುರದ ಅಮಿತ್ ಕಮ್ಮಾರ್ ಅವರು ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ತಲಾ ಒಂದೊAದು ಕಲಾಕೃತಿ ರಚಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.