ಇಬ್ಬರು ಬಾಲಕಿಯರ ಸಾವಿನ ಪ್ರಕರಣ: ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಠಾಕೂರ್

 

ಬೀದರ್, ಜೂ.೨೦- ಔರಾದ್ ತಾಲ್ಲೂಕಿನ ಶಂಬೆಳ್ಳಿ ಗ್ರಾಮದ ಒಂದೇ ಕುಟುಂಬದ ಇಬ್ಬರು ಬಾಲಕಿಯರು ಅನುಮಾನಾಸ್ಪದ ಆಹಾರ ಸೇವನೆಯ ಬಳಿಕ ಮೃತಪಟ್ಟಿದ್ದು, ಮತ್ತೊಬ್ಬ ಬಾಲಕಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಈಶ್ವರಸಿಂಗ್ ಠಾಕೂರ್ ಅವರು ನಗರದ ಗುದಗೆ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಸದಸ್ಯರ ಆರೋಗ್ಯ ವಿಚಾರಿಸಿದರು.

ಶಂಬೆಳ್ಳಿ ಗ್ರಾಮದ ವೈಜನಾಥ್ ಮತ್ತು ಇಂದುಮತಿ ದಂಪತಿಗಳ ಐದು ಮಕ್ಕಳಾದ ಭಾಗ್ಯಶ್ರೀ, ವಿಜಯಶ್ರೀ, ಭವಾನಿ, ಅಮೂಲ್ಯ ಹಾಗೂ ಸಂಧ್ಯಾರಾಣಿ ಕೆಲ ದಿನಗಳ ಹಿಂದೆ ಸಂಜೆ ಊಟದ ಬಳಿಕ ಮಾವಿನ ಹಣ್ಣು ಸೇವಿಸಿದ ನಂತರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರು. ಈ ಪೈಕಿ ಭವಾನಿ ಜೂನ್ ೮ರಂದು ಹಾಗೂ ಸಂಧ್ಯಾರಾಣಿ ಜೂನ್ ೯ರಂದು ಮೃತಪಟ್ಟಿದ್ದಾರೆ. ಅಮೂಲ್ಯ ಅವರು ತೀವ್ರ ಅಸ್ವಸ್ಥಗೊಂಡು ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಿರಿಯ ಸಹೋದರಿ ಭಾಗ್ಯಶ್ರೀ ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಈಶ್ವರಸಿಂಗ್ ಠಾಕೂರ್ ಅವರು ಅಮೂಲ್ಯ ಹಾಗೂ ಭಾಗ್ಯಶ್ರೀ ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಅಲ್ಲದೆ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು. ಕುಟುಂಬಕ್ಕೆ ಕಾನೂನುಬದ್ಧ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ದುರ್ಘಟನೆಯ ಕುರಿತು ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರಗಳು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು. ಜೊತೆಗೆ ಕುಟುಂಬಕ್ಕೆ ನ್ಯಾಯ ದೊರಕಿಸುವುದರೊಂದಿಗೆ ಚಿಕಿತ್ಸೆ ಮತ್ತು ಪುನರ್ವಸತಿಗೆ ಅಗತ್ಯ ನೆರವು ನೀಡಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ನಾಗಶೆಟ್ಟಿ ಶಂಬೆಳ್ಳಿ, ಚಂದ್ರಕಾAತ್ ವಿಶ್ವಕರ್ಮ ಹಾಗೂ ಕುಟುಂಬದ ಸಂಬAಧಿಕರು ಉಪಸ್ಥಿತರಿದ್ದರು.

Share This Article
Leave a Comment