ಕನಗನಹಳ್ಳಿಗೆ ಡಿ.ಸಿ.‌ಭೇಟಿ* *ಬೌದ್ಧ ಸ್ತೂಪ,ಅಶೋಕನ‌ ಶಿಲಾಕೃತಿ ವೀಕ್ಷಣೆ*

 

ಕಲಬುರಗಿ,ಜೂ.18-ಜಿಲ್ಲಾಧಿಕಾರಿ ಇಕ್ರಮ ಶರೀಫ್ ಅವರು ಗುರುವಾರ ಚಿತ್ತಾಪುರ ತಾಲೂಕಿನ ಐತಿಹಾಸಿಕ‌ ಕನಗನಹಳ್ಳಿಗೆ ಭೇಟಿ ನೀಡಿ ಬೌದ್ಧ ಸ್ತೂಪ ಮತ್ತು ಸಾಮ್ರಾಟ್ ಅಶೋಕನ ಶಿಲಾಕೃತಿ‌ ವೀಕ್ಷಿಸಿದರು.

 

ಇದಕ್ಕು ಮುನ್ನ ಜಿಲ್ಲಾಧಿಕಾರಿಗಳು ಚುತ್ತಾಪುರ ಪಟ್ಟಣದಲ್ಲಿ ತಾಲೂಕಾ ಆರೋಗ್ಯ ಆಸ್ಪತ್ರೆ ಗೆ ಭೇಟಿ ರೋಗಿಗಳ ಯೋಗಕ್ಷೇಮ‌ ವಿಚಾರಿಸಿದರು. ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಸೇವೆ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು. ತಾಲೂಕಾ ಕ್ರೀಡಾಂಣಕ್ಕೂ ಭೇಟಿ ನೀಡಿ ಕ್ರೀಡಾ ಚಟುವಟಿಕೆ ಮತ್ತು ಪ್ರಗತಿ ಕುರಿತು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.

 

ಇದಕ್ಕೂ ಮುನ್ನ ಸೇಡಂ ತಾಲೂಕಿನ ಮಳಖೇಡ ಕೋಟೆಗೆ ಭೇಟಿ ನೀಡಿದ ಅದರ ಸಂರಕ್ಷಣೆ ಕುರಿತು ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಪುರಾತತ್ವ ಮತ್ತು ಪರಂಪರೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

 

ಪ್ರೊಬೇಷನರ್‌ ಐ.ಎ.ಎಸ್ ಅಧಿಕಾರಿ ಶಿಖರ ಮೋಘಾ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಸೇಡಂ ತಹಶೀಲ್ದಾರ ಶ್ರೇಯಾಂಕಾ‌ ಧನಶ್ರೀ, ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ ಸೇರಿದಂತೆ ಮತ್ತಿತರರು ಇದ್ದರು.

Share This Article
Leave a Comment