ರಾಜ್ಯ ವಿಧಾನ ಪರಿಷತ್‌ಗೆ ಕಮಕನೂರ್ ಆಯ್ಕೆ: ಕಲಬುರ್ಗಿಯಲ್ಲಿ ಬೃಹತ್ ಕಟೌಟ್‌ನೊಂದಿಗೆ ವಿಜಯೋತ್ಸವ

 

ಕಲಬುರ್ಗಿ, ಜೂ.೧೮- ರಾಜ್ಯ ವಿಧಾನ ಪರಿಷತ್‌ಗೆ ಪೂರ್ಣಾವಧಿಗೆ ಕೋಲಿ ಸಮಾಜದ ನೇತಾರ ಹಾಗೂ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಆಯ್ಕೆಯಾಗಿರುವ ಕುರಿತು ಅಧಿಕೃತ ಘೋಷಣೆ ಹೊರಬರುತ್ತಿದ್ದಂತೆಯೇ ನಗರದ ಲಾಲ್‌ಗಿರಿ ಕ್ರಾಸ್‌ನಲ್ಲಿ ಗುರುವಾರ ಸಂಜೆ ತಿಪ್ಪಣ್ಣಪ್ಪ ಕಮಕನೂರ್ ಅವರ ಬೃಹತ್ ಕಟೌಟ್‌ನ್ನು ಹಾಕಿ ಕೋಲಿ ಸಮಾಜದವರು ಹಾಗೂ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು.

ಕೋಲಿ ಸಮಾಜದ ಹಿರಿಯ ಮುಖಂಡ ಅಮೃತ್ ಡಿಗ್ಗಿ ಅವರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಸುಖದೇವ್ ಕೂಗನೂರ್, ಶಾಮರಾವ್ ಸುಲ್ತಾನಪೂರ್, ಚಂದ್ರಶೇಖರ್ ದೇವಗುಡಿ, ಚಂದ್ರಕಾAತ್ ಸುರಪುರ, ಮಲ್ಲಿಕಾರ್ಜುನ್ ವೈ. ಕೂಡಿ, ದತ್ತು ಹೊನ್ನಾಳಿ, ಶಿವರಾಜ್ ಕಿರಸಾವಳಗಿ, ಲಕ್ಷಿö್ಮÃಬಾಯಿ ಗಂಡ ನಿಂಗಣ್ಣ ಸಂಕಾಳಿ, ಜೀಜಾಬಾಯಿ ಜಾಧವ್, ಸಂಗಮನಾಥ ಕಣ್ಣಿ, ಯಲ್ಲಪ್ಪ ಬಾಬುರಾವ್ ಕೋಬಾಳ್, ರಾಯಪ್ಪ ಹೊನಗುಂಟಿ, ಪ್ರಕಾಶ್ ಪುರೇನ್, ರಾಜು ತುವರ್, ಶರಣಪ್ಪ ಜೋಕೆ ಮುಂತಾದವರು ಪಾಲ್ಗೊಂಡಿದ್ದರು.

ಹ್ಯಾಟ್ರಿಕ್ ಗೆಲುವು:

ರಾಜ್ಯ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಐವರು ಅಭ್ಯರ್ಥಿಗಳು ಗೆದ್ದಿದ್ದು, ಅದೇ ರೀತಿ ತಿಪ್ಪಣ್ಣಪ್ಪ ಕಮಕನೂರ್ ಅವರು ಸಹ ಆಯ್ಕೆಯಾದರು. ತಿಪ್ಪಣ್ಣಪ್ಪ ಕಮಕನೂರ್ ಅವರು ಎರಡು ಅವಧಿಯವರೆಗೆ ಅಲ್ಪ ಅವಧಿಗೆ ಆಯ್ಕೆಯಾಗಿದ್ದು, ಈ ಬಾರಿ ಮೂರನೇ ಬಾರಿಗೆ ಪೂರ್ಣಾವಧಿಗೆ ಆಯ್ಕೆಯಾಗುವ ಮೂಲಕ ಮೇಲ್ಮನೆ ಸದಸ್ಯರಾಗಿ ಸತತ ಮೂರನೇ ಬಾರಿಗೆ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಪಡೆದರು.

ಒಮ್ಮೆ ಅಪೂರ್ಣ ಅವಧಿಯವರೆಗೆ, ಮತ್ತೊಮ್ಮೆ ಅಪೂರ್ಣ ಅವಧಿಯವರೆಗೆ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿದ್ದ ತಿಪ್ಪಣ್ಣಪ್ಪ ಕಮಕನೂರ್ ಅವರು, ಪೂರ್ಣಾವಧಿಗೆ ಕಮಕನೂರ್ ಅವರನ್ನು ನೇಮಕ ಮಾಡಬೇಕು ಎಂದು ಕೋಲಿ ಸಮಾಜವೂ ಸೇರಿದಂತೆ ಹಿಂದುಳಿದ ಮಠಾಧೀಶರೂ ಸಹ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದರು. ಪರಿಣಾಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕಮಕನೂರ್ ಅವರನ್ನು ಒಳಗೊಂಡು ಐವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರು. ಗುರುವಾರ ಚುನಾವಣೆ ಜರುಗಿ ಐವರು ಅಭ್ಯರ್ಥಿಗಳು ಆಯ್ಕೆಯಾದರು.

ತಿಪ್ಪಣ್ಣಪ್ಪ ಕಮಕನೂರ್ ಅವರು ನಿಷ್ಠಾವಂತ ಕಾಂಗ್ರೆಸ್ ನಾಯಕರಾಗಿದ್ದಾರೆ. ೧೯೭೩-೧೯೭೬ರ ಅವಧಿಯಲ್ಲಿ ಚಿತ್ತಾಪುರ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ, ಹತ್ತು ವರ್ಷಗಳ ಕಾಲ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ, ೧೨ ವರ್ಷಗಳ ಕಾಲ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ, ೨೦೦೦ರಿಂದ ೨೦೦೫ರವರೆಗೆ ಮಹಾನಗರ ಪಾಲಿಕೆಯ ಸದಸ್ಯರಾಗಿ, ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನೂ ಸಹ ಸಮರ್ಥವಾಗಿ ನಿಭಾಯಿಸಿದ್ದಾರೆ. ಸಿದ್ಧರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಗಳಾಗಿದ್ದಾಗ ತಿಪ್ಪಣ್ಣಪ್ಪ ಕಮಕನೂರ್ ಅವರು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿಯೂ ಸಹ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಮಹಾನಗರ ಪಾಲಿಕೆಯಲ್ಲಿ ಮೂರು ಬಾರಿ ಮಹಾಪೌರ ಹುದ್ದೆಯನ್ನು ಮನಸ್ಸು ಮಾಡಿದ್ದರೆ ತಿಪ್ಪಣ್ಣಪ್ಪ ಕಮಕನೂರ್ ಅವರು ಪಡೆಯಬಹುದಿತ್ತು. ಆದಾಗ್ಯೂ, ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಹಾಪೌರರ ಹುದ್ದೆಯನ್ನು ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟಿದ್ದರು. ಪರಿಷತ್‌ನಲ್ಲಿ ಅಪೂರ್ಣ ಅವಧಿಯವರೆಗೆ ಪರಿಷತ್ ಸದಸ್ಯರಾಗಿ ಇದೇ ಜೂನ್ ೩೦ರಂದು ಕಮಕನೂರ್ ಅವರ ಅವಧಿ ಅಂತ್ಯಗೊಳ್ಳಲಿತ್ತು. ಈಗ ಅವರು ಪೂರ್ಣಾವಧಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಕೇವಲ ಕಲಬುರ್ಗಿ ಅಷ್ಟೇ ಅಲ್ಲ ರಾಜ್ಯಾದ್ಯಂತ ಕೋಲಿ ಸಮಾಜದವರು ಸಂಘಟಿತರಾಗಿ ಬೆಂಬಲಿಗರು ಮತ್ತು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಕಮಕನೂರ್ ಭಾವುಕ:

ಪೂರ್ಣಾವಧಿ ರಾಜ್ಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಬೆಂಗಳೂರಿನಲ್ಲಿ ರಾಜ್ಯ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಅವರು ಭಾವುಕರಾಗಿ ಮಾತನಾಡಿ, ನನಗೆ ಎಲ್ಲರೂ ಬೆಂಬಲಿಸಿದರು. ಕೇವಲ ಕಲಬುರ್ಗಿ ಅಷ್ಟೇ ಅಲ್ಲ, ಬೀದರ್, ಯಾದಗಿರಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ರಾಜ್ಯದ ಎಲ್ಲ ಶಾಸಕರು ಸಹ ಬೆಂಬಲಿಸಿದ್ದಾರೆ. ಸಚಿವರಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಅವರೂ ಸೇರಿದಂತೆ ಬೆಂಬಲ ಹಾಗೂ ಸಹಕಾರ ಮರೆಯಲಾರೆ. ಜೊತೆಗೆ ರಾಜ್ಯದ ಗೃಹ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮನಸ್ಸು ಮಾಡಿದ್ದರಿಂದ ನಾನು ಪರಿಷತ್‌ಗೆ ಆಯ್ಕೆಯಾದೆ ಎಂದರು.

ನಾನು ಪರಿಷತ್‌ಗೆ ಆಯ್ಕೆಯಾದರೆ ಕೋಲಿ ಸಮಾಜಕ್ಕೆ ಧ್ವನಿ ಬರುತ್ತದೆ ಎಂಬ ಕಾರಣಕ್ಕೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಂಡಿದ್ದು, ಈ ಸಂಬAಧ ಪಕ್ಷದ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುವುದಾಗಿಯೂ ಸಹ ಅವರು ತಿಳಿಸಿದರು.

Share This Article
Leave a Comment