ಶಿರಪುರ ಮಾದರಿ ಅವೈಜ್ಞಾನಿಕ ಕಾಮಗಾರಿಗೆ ಹೊಲಗಳಿಗೆ ಹಾನಿ: ಹರ್ಷಾನಂದ್ ಗುತ್ತೇದಾರ್ ಟೀಕೆ

 

ಕಲಬುರ್ಗಿ, ಜು.೧೪- ಶಿರಪುರ ಮಾದರಿಯ ಅವೈಜ್ಞಾನಿಕ ಕಾಮಗಾರಿಗಳಿಂದ ನಮ್ಮ ಆಳಂದ ತಾಲ್ಲೂಕಿನ ಅಂಬೇವಾಡ ಗ್ರಾಮದ ಹಲವಾರು ಬಡ ರೈತರ ಹೊಲಗಳು ಹಾಳಾಗುತ್ತಿರುವ ಬಗ್ಗೆ ರೈತರು ತಮ್ಮ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದರು. ಆ ಹಿನ್ನೆಲೆಯಲ್ಲಿ ರೈತರ ಹೊಲಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಲಾಯಿತು. ನಂತರ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ತ್ವರಿತವಾಗಿ ಪರಿಶೀಲಿಸಿ, ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಸೂಚಿಸಿದ್ದಾಗಿ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷಾನಂದ್ ಎಸ್. ಗುತ್ತೇದಾರ್ ಅವರು ತಿಳಿಸಿದ್ದಾರೆ.

ರೈತರ ಹಿತಾಸಕ್ತಿ ಹಾಗೂ ಅವರ ಬದುಕಿನ ಪ್ರಶ್ನೆಗೆ ಯಾವುದೇ ರೀತಿಯ ನಿರ್ಲಕ್ಷ್ಯ ಸಹಿಸಲಾಗುವುದಿಲ್ಲ. ರೈತರ ಪರವಾಗಿ ಸದಾ ನಿಲ್ಲುವ ಬದ್ಧತೆಯೊಂದಿಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುವುದು. ರೈತರ ಸಮಸ್ಯೆ ನಮ್ಮ ಸಮಸ್ಯೆ. ರೈತರ ಹಿತ ರಕ್ಷಣೆ ನಮ್ಮ ಮೊದಲ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

Share This Article
Leave a Comment