ಗಾಯಾಳು ವಿದ್ಯಾರ್ಥಿನಿಯರ ಚಿಕಿತ್ಸೆಯಲ್ಲಿ ನಿರ್ಲಕ್ಷ: ಡಾ. ಸುಧಾ ಹಾಲ್ಕೆ ಗಂಭೀರ ಆರೋಪ

 

ಕಲಬುರ್ಗಿ, ಜು.೧೪- ನಗರದ ಏಕೈಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೇಲ್ಛಾವಣೆ ಕುಸಿದು ಮೂವರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿಯೂ ಸಹ ನಿರ್ಲಕ್ಷಿಸಲಾಗಿದೆ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ವಕ್ತಾರೆ ಡಾ. ಸುಧಾ ಆರ್. ಹಾಲ್ಕೆöÊ ಅವರು ಗಂಭೀರ ಆರೋಪ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆಸ್ಪತ್ರೆಯಲ್ಲಿ ಗಾಯಾಳು ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಅವರು, ಘಟನೆ ಅತ್ಯಂತ ದು:ಖಕರ ಹಾಗೂ ಖಂಡನೀಯ. ಒಬ್ಬ ವಿದ್ಯಾರ್ಥಿನಿಗೆ ತಲೆಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬಳಿಗೆ ಬೆನ್ನಿಗೆ ಹಾಗೂ ಇನ್ನೊಬ್ಬಳಿಗೆ ಕೈಗೆ ಗಾಯವಾಗಿದೆ. ಇದಕ್ಕಿಂತಲೂ ನೋವಿನ ಸಂಗತಿಯೆAದರೆ, ಗಾಯಗೊಂಡ ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಆರೈಕೆಯ ಬಗ್ಗೆ ಕಂಡುಬರುತ್ತಿರುವ ನಿರ್ಲಕ್ಷ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ದಾಖಲಿಸಿರುವ ವಾರ್ಡನಲ್ಲಿ ಫ್ಯಾನ್ಸ್ ಶಬ್ದ ಎಷ್ಟೋ ಜೋರಾಗಿದ್ದು, ಸಾಮಾನ್ಯ ವ್ಯಕ್ತಿಗೂ ವಿಶ್ರಾಂತಿ ಪಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ವೈದ್ಯೆಯಾಗಿರುವ ನನಗೆ ಈ ದೃಶ್ಯ ಅತ್ಯಂತ ಬೇಸರ ಮತ್ತು ಆಕ್ರೋಶವನ್ನುಂಟು ಮಾಡಿತು. ತಲೆಗೆ ಗಾಯಗೊಂಡ ವಿದ್ಯಾರ್ಥಿನಿಗೆ ವಿಶೇಷ ನಿಗಾ ಮತ್ತು ಅಗತ್ಯವಿದ್ದಲ್ಲಿ ಐಸಿಯು ಚಿಕಿತ್ಸೆ ನೀಡಬೇಕಾಗಿದ್ದರೂ, ಸಾಮಾನ್ಯ ವಾರ್ಡನಲ್ಲಿ ದಾಖಲಿಸಿರುವುದು ಆತಂಕಕಾರಿ ಸಂಗತಿಯಾಗಿದೆ. ರೋಗಿಯ ಆರೋಗ್ಯ ಮತ್ತು ಆರಾಮದ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ವಿದ್ಯಾರ್ಥಿಗಳ ವಿಶೇಷವಾಗಿ ವಿದ್ಯಾರ್ಥಿನಿಯರ ಸುರಕ್ಷತೆ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೊದಲ ಆದ್ಯತೆಯಾಗಿರಬೇಕು. ಆದರೆ ಈ ಘಟನೆ ಸಾರ್ವಜನಿಕ ಕಟ್ಟಡಗಳ ನಿರ್ವಹಣೆಯಲ್ಲಿನ ನಿರ್ಲಕ್ಷ್ಯ ಮತ್ತು ಜನರ ಜೀವದ ಬಗ್ಗೆ ಇರುವ ಬೇಜವಾಬ್ದಾರಿತನವನ್ನು ಬಯಲಿಗೆಳೆಯುತ್ತದೆ. ಕಳೆದ ೬೦ ವರ್ಷಗಳಿಂದ ಜಿಲ್ಲೆಯ ಜನರು ಕಲ್ಲುಹೃದಯದ ಹಾಗೂ ಜನರ ನೋವಿಗೆ ಸ್ಪಂದಿಸದ ನಾಯಕರನ್ನು ಕಂಡಿರುವುದು ನಮ್ಮ ದುರದೃಷ್ಟವೇನೋ ಎಂಬ ಭಾವನೆ ಮೂಡುತ್ತದೆ. ನಮ್ಮ ಜಿಲ್ಲೆ ಇದಕ್ಕಿಂತ ಉತ್ತಮ ಆಡಳಿತಕ್ಕೆ ಅರ್ಹವಾಗಿದೆ. ನಮ್ಮ ವಿದ್ಯಾರ್ಥಿಗಳು ಇದಕ್ಕಿಂತ ಉತ್ತಮ ಸೌಲಭ್ಯಗಳಿಗೆ ಅರ್ಹರು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಗಾಯಗೊಂಡ ವಿದ್ಯಾರ್ಥಿನಿಯರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಜೊತೆಗೆ ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು, ವಿದ್ಯಾರ್ಥಿನಿಯರಿಗೆ ಉತ್ತಮ ಚಿಕಿತ್ಸೆ ಒದಗಿಸಿ, ಈ ಘಟನೆಗೆ ಕಾರಣವಾದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಜಿಲ್ಲೆಯ ಜನರೇ ಎಚ್ಚೆತ್ತುಕೊಳ್ಳಿ. ಜವಾಬ್ದಾರಿತನವನ್ನು ಕೇಳುವ ಸಮಯ ಈಗ ಬಂದಿದೆ ಎಂದು ತಿಳಿಸಿದ್ದಾರೆ.

Share This Article
Leave a Comment