ಮತೀನ ಪಟೇಲ್ ಅವರ 44 ನೇ ಜನ್ಮ ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ.

 

ಅಫಜಲಪೂರ : ಬಡವರ ಬಂಧು, ದಲಿತರ ಆಶಾಕಿರಣ ಹಾಗೂ ಜಾತ್ಯತೀತ ನಾಯಕರೆಂದು ಹೆಸರಾಗಿರುವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮತೀನ್ ಅಹ್ಮದ್ ಪಟೇಲ್ ಜೀ ಅವರ 44ನೇ ಜನ್ಮದಿನದ ಅಂಗವಾಗಿ ಅಫಜಲಪೂರ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ, ಅವರ ಆರೋಗ್ಯ ವಿಚಾರಿಸಲಾಯಿತು. ಸಮಾಜ ಸೇವೆಯ ಮೂಲಕ ಜನರೊಂದಿಗೆ ಸದಾ ಬೆಸೆದುಕೊಂಡಿರುವ ಮತೀನ್ ಅಹ್ಮದ್ ಪಟೇಲ್ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು, ಮತೀನ್ ಅಹ್ಮದ್ ಪಟೇಲ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಸಮಾಜಮುಖಿ ಕಾರ್ಯಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಸ್ಪಾಕ್ ಬಂದರವಾಡ, ಶರಣು ಕುಂಬಾರ , ಹಬೀಮ ಗೊಬ್ಬೂರ, ದುಂಡು ಜಮಾದಾರ, ಹಾಜಿ ಮುಜಾವರ ಮೈಬೂಬ ಮನಿಯಾರ, ಪುರಸಭೆ ಸದಸ್ಯ ಸೈಪನ್ ಚಿಕ್ಕಳಗಿ ಮತ್ತು , ಗೌಸ್ ಮುಜಾವರ್, ಮೈಬೂಬ ಸಂಗಾಪೂರ, ರುಕ್ಮೊದ್ದಿನ್ ಪೊರತಬಾದ, ಕಬೀರ ಪಟೇಲ ಬೋಗನಳ್ಳಿ , ನೂರಾಲಿ ಬಂದರವಾಡ, ಹಾಜಿ ಮುಜಾವರ, ಗಾಲೀಬ ಮುಜಾವರ, ಮೈಬೂಬ ಮನಿಯಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Share This Article
Leave a Comment