ಮುಂದಿನ ವರ್ಷ ದಿ. ಕೆ.ಬಿ. ಶಾಣಪ್ಪ ಪುತ್ಥಳಿ ನಿರ್ಮಾಣ: ಪುತ್ರ ಅಶೋಕ್ ಘೋಷಣೆ.

 

ಕಲಬುರ್ಗಿ, ಮೇ.೧೭- ಮುಂದಿನ ವರ್ಷ ತಮ್ಮ ತಂದೆ ದಿ. ಕೆ.ಬಿ. ಶಾಣಪ್ಪ ಅವರ ಜನ್ಮದಿನದಂದು ಅವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು ಎಂದು ಕೆ.ಬಿ. ಶಾಣಪ್ಪ ಅವರಪುತ್ರ ಅಶೋಕ್ ಕೆ.ಬಿ., ಅವರು ಹೇಳಿದರು.

ನಗರದ ಶಾಹಬಾದ ರಸ್ತೆಯ ನೃಪತುಂಗ ಕಾಲೋನಿಯ ಉದ್ಯಾನವನದಲ್ಲಿ ಅಜಾತಶತ್ರು, ಮಾಜಿ ಸಚಿವ, ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪಾ ನವರ ೮೮ನೇ ಜನ್ಮದಿನ ಅಂಗವಾಗಿ ಕೆ.ಬಿ.ಶಾಣಪ್ಪ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮುಂದಿನ ವರ್ಷ ಮೇ ೧೬ರಂದು ನಮ್ಮ ತಂದೆಯವರ ಪುತ್ಥಳಿಯನ್ನು ನೃಪತುಂಗ ಕಾಲೋನಿಯ ಉದ್ಯಾನವನದಲ್ಲಿ ನಿರ್ಮಾಣ ಮಾಡಲು ಕುಟುಂಬ ಸದಸ್ಯರು,ಆಭಿಮಾನಿಗಳು ಹಾಗೂ ಹಿತೈಷಿಗಳು ಒಲವು ತೋರಿದ್ದಾರೆ ಎಂದರು.

ನAತರ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆ.ಬಿ. ಶಾಣಪ್ಪನವರ ೮೮ನೇ ಜನ್ಮದಿನಾಚರಣೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆ.ಬಿ. ಶಾಣಪ್ಪ ಅವರ ಧರ್ಮಪತ್ನಿ ಜಮಲಮ್ಮ, ವಿಜಯಲಕ್ಷ್ಮೀ ನಾಗೇಶ್, ಎ.ಎಚ್. ನಾಗೇಶ್, ದೇವೆಂದ್ರ ಸಂಗೆಪ್ಪ ಸೊಲ್ಲಾಪೂರ್, ಮಂಜುನಾಥ ನಾಲವಾರಕರ್, ಮಲ್ಲಿಕಾರ್ಜುನ್ ದೊಡ್ಡಮನಿ, ಜೈರಾಜ್ ಕಿಣಗಿಕರ್, ಪಾಯಣ್ಣಾ ಹಿಪ್ಪರಗಿ, ದೇವೆಂದ್ರ ಬಿಳ್ವಾರ್ ಮುಂತಾದವರು ಉಪಸ್ಥಿತರಿದ್ದರು

Share This Article
Leave a Comment