ಹರಿಯಾಣದಿಂದ ಬಂಗಾಳವರೆಗೆ: ಮೋದಿ ಪ್ರಧಾನಿಯಾದ ಬಳಿಕ 9 ರಾಜ್ಯಗಳಲ್ಲಿ ಬಿಜೆಪಿ ಮೊದಲ ಸರ್ಕಾರ.

 

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಸಾಧನೆ ಮಾಡಿರುವ ಬಿಜೆಪಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತಕ್ಕೆ ತೆರೆ ಎಳೆದು ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿದೆ.

ಈ ಗೆಲುವಿನೊಂದಿಗೆ 2014ರಲ್ಲಿ Narendra Modi ಪ್ರಧಾನಿಯಾದ ಬಳಿಕ ದೇಶದ ಒಂಬತ್ತು ರಾಜ್ಯಗಳಲ್ಲಿ ಮೊದಲ ಬಾರಿಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆ ಪಡೆದು ಸರ್ಕಾರ ರಚಿಸಿದ ಸಾಧನೆ ಮಾಡಿದೆ.

ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಹೊಸ ಪ್ರದೇಶಗಳಲ್ಲಿ ತನ್ನ ರಾಜಕೀಯ ಪ್ರಭಾವವನ್ನು ವಿಸ್ತರಿಸುತ್ತಾ ಬಂದಿದ್ದು, ಪರಂಪರ ವಾಗಿ ಇತರ ಪಕ್ಷಗಳ ಬಲವಾಗಿದ್ದ ರಾಜ್ಯಗಳಲ್ಲಿಯೂ ಅಧಿಕಾರಕ್ಕೇರಲು ಯಶಸ್ವಿಯಾಗಿದೆ. ಹರಿಯಾಣ, ಮಹಾರಾಷ್ಟ್ರ, ಅಸ್ಸಾಂ, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ ಮೈತ್ರಿ ಸಮೀಕರಣಗಳು ಹಾಗೂ ಈಗ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ತನ್ನ ರಾಜಕೀಯ ನೆಲೆ ಬಲಪಡಿಸಿದೆ.

ವಿಶೇಷವಾಗಿ West Bengal ನಲ್ಲಿ ಬಿಜೆಪಿ ಜಯ ಸಾಧಿಸಿರುವುದು ರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ತಿರುವಾಗಿ ಪರಿಗಣಿಸಲಾಗುತ್ತಿದೆ. ದೀರ್ಘಕಾಲದ ಎಡಪಂಥೀಯ ಹಾಗೂ ತೃಣಮೂಲ ಪ್ರಾಬಲ್ಯ ಹೊಂದಿದ್ದ ರಾಜ್ಯದಲ್ಲಿ ಕೇಸರಿ ಪಡೆ ಮೊದಲ ಬಾರಿಗೆ ಅಧಿಕಾರದ ಗದ್ದುಗೆ ಏರಿರುವುದು ಪಕ್ಷದ ಪ್ರಮುಖ ರಾಜಕೀಯ ಮೈಲುಗಲ್ಲಾಗಿದೆ.

ಬಿಜೆಪಿ ನಾಯಕರು ಇದನ್ನು ಪ್ರಧಾನಿ ಮೋದಿ ಅವರ ನಾಯಕತ್ವ, ಪಕ್ಷದ ಸಂಘಟನೆ ಶಕ್ತಿ ಹಾಗೂ ಕಾರ್ಯಕರ್ತರ ಪರಿಶ್ರಮದ ಫಲವೆಂದು ಹೇಳಿದ್ದಾರೆ.

Share This Article
Leave a Comment