ವಿಜಯಪುರ: ನಗರದ ಅಂಬೇಡ್ಕರ್ ಸರ್ಕಲ್ ಸ್ಟೇಡಿಯಂ ಸಮೀಪದಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಕಾಣೆಯಾಗಿರುವ ಘಟನೆ ವರದಿಯಾಗಿದೆ.
ಕಾಣೆಯಾದ ವಿದ್ಯಾರ್ಥಿಯನ್ನು ಅಬ್ದುಲ್ ಮಾಜಿದ್ (ತಂದೆ: ದೌಲ್ ಸಾಬ್, ನಿವಾಸ: ಪಡ್ನೂರ್ ಬಡದಾಳ) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ವಿವರಗಳ ಪ್ರಕಾರ, ಅಬ್ದುಲ್ ಮಾಜಿದ್ ಅವರು ಅಂಬೇಡ್ಕರ್ ಸರ್ಕಲ್ ಸ್ಟೇಡಿಯಂ ಹತ್ತಿರದಿಂದ ಕಾಣೆಯಾಗಿದ್ದು, ಕುಟುಂಬಸ್ಥರು ಹಾಗೂ ಸಂಬಂಧಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಸಂಬಂಧಪಟ್ಟ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಹುಡುಕಾಟ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ವಿದ್ಯಾರ್ಥಿ ಯಾರಿಗಾದರೂ ಕಂಡಲ್ಲಿ ತಕ್ಷಣ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಮಾಹಿತಿ ನೀಡುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ:
📞 6362986774
📞 9900485552