ಕಲಬುರಗಿ: ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಆರ್‌ಎಂಎಸ್ ಶಾಲೆಯ ಸಮೀಪ ಭಾರೀ ಅನಾಹುತ ತಪ್ಪಿದ ಘಟನೆ ನಡೆದಿದೆ.
ಅಫಜಲಪುರದಿಂದ ಕಲಬುರಗಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಒಂದು ತಾಂತ್ರಿಕ ದೋಷಕ್ಕೆ ಒಳಗಾದಾಗ, ಚಾಲಕನು ಸಮಯೋಚಿತವಾಗಿ ಚಾತುರ್ಯ ಪ್ರದರ್ಶಿಸಿ ಬಸ್‌ನ ನಿಯಂತ್ರಣವನ್ನು ಕಾಪಾಡಿಕೊಂಡಿದ್ದಾನೆ. ಇದರಿಂದ ಬಸ್ಸು ಜಮೀನಿನಲ್ಲಿ ಹೋಗಿದ್ದು ಇದರಿಂದ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿ, ಪ್ರಯಾಣಿಕರು ಭಯದಿಂದ ಪಾರಾಗಿದ್ದಾರೆ.
ಘಟನೆ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಕೆಲಕಾಲ ಆತಂಕಕ್ಕೊಳಗಾದರೂ, ಚಾಲಕನ ಸಮರ್ಪಕ ಕ್ರಮದಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯ ನಂತರ ಸ್ಥಳೀಯರು ಚಾಲಕನ ತಕ್ಷಣದ ಪ್ರತಿಕ್ರಿಯೆಯನ್ನು ಪ್ರಶಂಸಿಸಿದ್ದಾರೆ.
ಈ ಘಟನೆ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿದರೂ, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ವರದಿ ಆಗಿಲ್ಲ ಎಂದು ತಿಳಿದುಬಂದಿದೆ.