ಕೃಷಿ ಹೊಂಡದಲ್ಲಿ ದುರಂತ: ನೀರು ಕುಡಿಯಲು ಹೋಗಿ ಜಾರಿ ಬಿದ್ದು ಅಕ್ಕ-ತಮ್ಮ ಸಾವು.

 

ಮಧುಗಿರಿ: ತಾಲೂಕಿನ ಮಿಡಿಗೇಶಿ ಹೋಬಳಿ ಬೆನಕನಹಳ್ಳಿ ಸಮೀಪದ ಕೃಷಿ ಹೊಂಡದಲ್ಲಿ ಭಾನುವಾರ ನಡೆದ ದಾರುಣ ಘಟನೆಗೆ ಇಬ್ಬರು ಮಕ್ಕಳ ಜೀವ ಬಲಿಯಾದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಮಿಡಿಗೇಶಿ ಹೋಬಳಿಯ ಕಸಾಪುರ ಗ್ರಾಮದ ಮಂಜುನಾಥ್ ಅವರ ಪುತ್ರಿ ಸುಚಿತ್ರಾ (11) ಮತ್ತು ಪುತ್ರ ರವೀಂದ್ರ (9) ಮೃತಪಟ್ಟವರು. ಮಂಜುನಾಥ್ ಅವರಿಗೆ ಮೂವರು ಮಕ್ಕಳು ಇದ್ದು, ಭಾನುವಾರ ಮೂವರೂ ಮೇಕೆ ಮೇಯಿಸಲು ತೆರಳಿದ್ದರು. ಈ ವೇಳೆ ಬಾಯಾರಿಕೆ ತಟ್ಟಿದ ಕಾರಣ ನೀರು ಕುಡಿಯಲು ಹೊಂಡದ ಬಳಿ ಹೋಗಿದ್ದಾಗ ಕಾಲು ಜಾರಿ ನೀರಿಗೆ ಬಿದ್ದು ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಧಾವಿಸಿ ಮಕ್ಕಳನ್ನು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Share This Article
Leave a Comment