ವಕೀಲರ ಸಂಘದ ಅಧ್ಯಕ್ಷರಾಗಿ ಅರ್ಜುನ ಕೆರೂರ ಅವಿರೋಧ ಆಯ್ಕೆ.

 

ಅಫಜಲಪುರ: ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಅರ್ಜುನ ಕೆರೂರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್. ಹಿರೇಮಠ ಘೋಷಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ ಒಂದು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅರ್ಜುನ ಕೆರೂರ ಅವರು ಸ್ಪರ್ಧೆಯಿಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾದರು.

ಆಯ್ಕೆ ಬಳಿಕ ಮಾತನಾಡಿದ ಅರ್ಜುನ ಕೆರೂರ, “ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ವಕೀಲರಿಗೆ ನಾನು ಕೃತಜ್ಞ. ಮುಂದಿನ ದಿನಗಳಲ್ಲಿ ವಕೀಲರ ಹಿತರಕ್ಷಣೆ ಹಾಗೂ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ತಾಲೂಕಿನಲ್ಲಿ ಹೊಸ ನ್ಯಾಯಾಲಯ ಕಟ್ಟಡದ ಅಗತ್ಯವಿದ್ದು, ಅದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಕೀಲರಾದ ಕೆ.ಜಿ. ಪೂಜಾರಿ, ವಾಸೀಮ್ ಜಾಗೀರದಾರ, ನಾಗೇಶ್ ಕೊಳ್ಳಿ, ಎಸ್.ಜಿ. ಹುಲ್ಲೂರ, ಮಂಜುನಾಥ್ ಕೊಳ್ಳಿ, ಬಿ.ಎಚ್. ದಾನಮಗುಡಿ, ಎಸ್.ಟಿ. ರಾಠೋಡ, ಎಸ್.ಜೆ. ಗುತ್ತೇದಾರ, ರಾಜೇಂದ್ರ ಸರ್ದಾರ್, ಎಂ.ಕೆ. ಪಟೇಲ್, ಅನೀತಾ ದೊಡ್ಡನಿ, ಪಿ.ಬಿ. ಪಾಟೀಲ್, ಅನೀಲ ಜಮಾದಾರ, ದತ್ತು ಪೂಜಾರಿ, ಎಂ.ಎಂ. ಸುತಾರ, ಸಂತೋಷ ಸುಜುಳೆ, ಡಿ.ಎಸ್. ಕುಂಬಾರ, ಗುರುದೇವ ಪೂಜಾರಿ, ಗೊಲ್ಲಾಳ್ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share This Article
Leave a Comment