
ಅಫಜಲಪೂರ : ತಾಲೂಕಿನಲ್ಲಿ ಶಾಸಕರ ಸುಪುತ್ರ ಅರುಣ್ ಪಾಟೀಲ್ ಅವರು ಬಸವಣ್ಣನವರ ತತ್ವ ಸಿದ್ದಾಂತದಲ್ಲಿ ಕೆಲಸ ಮಾಡುತ್ತಿದ್ದಾರೆ, ಶಾಸಕರ ಮುನಿಮರಾಗಿ ನಾನು ಕೆಲಸ ಮಾಡುತಿದ್ದೇನೆ ಎಂದು ಅರುಣ್ ಪಾಟೀಲ್ ಹೇಳಿರುವದನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ ಅದರಲ್ಲಿ ಏನು ತಪ್ಪಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಸಿ ಮಾತನಾಡಿದ ಅವರು ಹಿರಿಯ ಮುತ್ಸದ್ದಿ ನಾಯಕ ಶಾಸಕ ಎಂ ವಾಯ ಪಾಟೀಲ್ ಅವರಿಗೆ ವಯಸ್ಸಾಗಿದೆ ಅವರ ಮುನಿಮರಾಗಿ ಅವರ ಸುಪುತ್ರ ಕೆಲಸ ಮಾಡುತ್ತಿದ್ದಾರೆ ಇದನ್ನೂ ಬಹಿರಂಗವಾಗಿ ಸ್ವತಃ ಅರುಣ ಪಾಟೀಲ್ ಅವರೇ ಹೇಳಿದ್ದಾರೆ ತಪ್ಪೇನು ಇದರಲ್ಲಿ ಎಂದು ಅಸಮಾಧಾನಿತರಿಗೆ ಪ್ರಶ್ನಿಸಿದರು. ಅರುಣ್ ಪಾಟೀಲ್ ಅವರ ಕಾರ್ಯವೈಖರಿ ಉತ್ತಮವಾಗಿ ಸಾಗುತಿದ್ದು ಅವರ ಬೆಳವಣಿಗೆ ಕಂಡು ಸಹಿಸಿದೆ ಕೆಲವು ಜನರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಇದರಿಂದ ಮುಂಬರುವ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಮಾಲೀಕಯ್ಯಾ ಗುತ್ತೇದಾರ ಹಾಗೂ ಜೆ ಎಂ ಕೊರಬು ಅವರಿಗೆ ತಿರುಗೇಟು ನೀಡಿದರು.