ನಾಡಿನಾದ್ಯಂತ ಎಸ್‌ಎಸ್‌ಡಬ್ಲ್ಯೂ ನ್ಯೂಜ್ ಚಾನೆಲ್ ಕೋಮು ಸಾಮರಸ್ಯ ಪಸರಿಸಲಿ:

ನಾಡಿನಾದ್ಯಂತ ಎಸ್‌ಎಸ್‌ಡಬ್ಲ್ಯೂ ನ್ಯೂಜ್ ಚಾನೆಲ್ ಕೋಮು ಸಾಮರಸ್ಯ ಪಸರಿಸಲಿ: ಚಿನಿವಾರ್
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಡಗೇರಿ ಗ್ರಾಮದ ಸಂತರಾದ ಚಂದಾಸಾಬ್ ಮತ್ತು ವರ ಹಳ್ಳೆರಾಯ್ ಅವರ ಭಾವೈಕ್ಯತೆ ಕೇಂದ್ರವಾದ ವಡಗೇರಿ ಗ್ರಾಮದ ಮೂಲಕ ಎಸ್‌ಎಸ್‌ಡಬ್ಲ್ಯೂ ಕನ್ನಡ ನ್ಯೂಜ್ ಚಾನೆಲ್ ಇಡೀ ಕರ್ನಾಟಕದಾದ್ಯಂತ ಕೋಮು ಸಾಮರಸ್ಯವನ್ನು ಪಸರಿಸಲಿ ಎಂದು ಹಿರಿಯ ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಅವರು ಹೇಳಿದರು.

ತಾಲ್ಲೂಕಿನ ವಡಗೇರಾದ ಚಂದಾಸಾಬ್ ದರ್ಗಾದಲ್ಲಿ ಕಾವ್ಯಾ ಸಿದ್ದಣ್ಣ ವಡಗೇರಿ ಅವರ ಸಾರಥ್ಯದ ಎಸ್‌ಎಸ್‌ಡಬ್ಲ್ಯೂ ಕನ್ನಡ ನ್ಯೂಜ್ ಚಾನೆಲ್‌ನ ಲೋಗೋ (ಲಾಂಛನ) ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಚಂದಾಸಾಬ್ ಹಾಗೂ ಹಳ್ಳೆರಾಯ್ ಅವರಿಬ್ಬರ ಇತಿಹಾಸವು ಕೋಮು ಸಾಮರಸ್ಯದ ಪ್ರತೀಕವಾಗಿದೆ. ಹಾಗಾಗಿ ಇಂದಿನ ದಿನಮಾನಗಳಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯಕ್ಕೆ ಇಬ್ಬರು ಸಂತರ ಮಾರ್ಗದಲ್ಲಿ ಮುನ್ನಡೆಯುವುದು ಅಗತ್ಯವಾಗಿದೆ.
ಕಾವ್ಯ ಅವರ ತಂದೆ ಸಿದ್ದಣ್ಣ ಅವರು ಆರೋಗ್ಯ ಇಲಾಖೆಯಲ್ಲಿ ಹಾಗೂ ಅವರ ತಾಯಿ ಶ್ರೀಮತಿ ಸಾವಿತ್ರಿ ಅವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಕಾವ್ಯ ಅವರು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಶಿಕ್ಷಣ ಮತ್ತು ಆರೋಗ್ಯ ಮನುಷ್ಯನ ಎರಡು ಕಣ್ಣುಗಳು. ಹಾಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ನ್ಯೂಜ್ ಚಾನೆಲ್ ಹೆಚ್ಚು ಆದ್ಯತೆ ಕೊಡಬೇಕು ಎಂದು ಅವರು ಹೇಳಿದರು.
ಕಾವ್ಯ ಸಿದ್ದಣ್ಣ ವಡಗೇರಿ ಅವರು ಮೂಲತ: ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ್ ಗಾಣಗಾಪುರದವರು. ಅವರ ಗ್ರಾಮದಲ್ಲಿನ ಸುಮಾರು ೧೫೦ ಕುಟುಂಬಗಳು ಮೊದಲು ವಡಗೇರಾದಲ್ಲಿ ವಾಸಿಸುತ್ತಿದ್ದರು. ಆ ಎಲ್ಲ ಕುಟುಂಬಗಳು ಈ ಹಿಂದೆಯೇ ಸಾಮೂಹಿಕವಾಗಿ ದೇವಲ್ ಗಾಣಗಾಪುರಕ್ಕೆ ವಲಸೆ ಬಂದಿದ್ದರು. ಹಾಗಾಗಿ ಕಾವ್ಯಾ ಅವರು ತಮ್ಮ ಮೂಲ ಸ್ಥಳವಾದ ವಡಗೇರಾದಲ್ಲಿ ಹೊಸ ನ್ಯೂಜ್ ಚಾನೆಲ್ ಆರಂಭಿಸಿದ್ದು ತವರು ನೆಲಕ್ಕೆ ಕೊಟ್ಟ ಗೌರವವಾಗಿದೆ. ತಮ್ಮ ತವರು ನೆಲವನ್ನು ಯಾರೂ ಮರೆಯಬಾರದು ಎಂದು ಹೇಳಿದ ಅವರು, ನ್ಯೂಜ್ ಚಾನೆಲ್ ಕೇವಲ ಯಡ್ರಾಮಿ, ಜೇವರ್ಗಿ, ಕಲಬುರ್ಗಿಯಷ್ಟೇ ಅಲ್ಲ, ಇಡೀ ಕರ್ನಾಟಕ ರಾಜ್ಯದಾದ್ಯಂತ ತನ್ನ ಸೇವೆಯನ್ನು ವಿಸ್ತರಿಸಲಿ ಎಂದು ಅವರು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಾಯಬಣ್ಣ ಕಾಳಪ್ಪ ವಡಗೇರಿ ಅವರು ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚಂದಮ್ಮ ಚಂದ್ರಶೇಖರ್ ಪಾಟೀಲ್ ಅವರು ವಹಿಸಿದ್ದರರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ರಾಜೇಂದ್ರ ಕೊರಬ ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ನ್ಯೂಜ್ ಚಾನೆಲ್‌ಗಳು ಪ್ರಭಾವವನ್ನು ಹೊಂದಿವೆ. ಸಿದ್ದಣ್ಣ ಡಿ. ವಡಗೇರಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿರಪರಿಚಿತ. ಅವರು ತಮ್ಮ ಇಬ್ಬರು ಮಕ್ಕಳಿಗೆ ಕಾವ್ಯ ಮತ್ತು ಕಿರಣ್ ಎಂದು ಹೆಸರು ಇಡುವ ಮೂಲಕ ಸಾಹಿತ್ಯದ ಕೃಷಿಯನ್ನು ತಮ್ಮ ಕುಟುಂಬದಿಂದಲೇ ಆರಂಭಿಸಿದ್ದಾರೆ. ಕಾವ್ಯ ಅತ್ಯಂತ ಚಟುವಟಿಕೆಯುಳ್ಳವರಾಗಿದ್ದು, ನ್ಯೂಜ್ ಚಾನೆಲ್ ಬೆಳೆಸುವ ಅವರ ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯದು ಆಗಲಿ ಎಂದು ಶುಭ ಹಾರೈಸಿದರು.
ಶ್ರೀ ಚಂದಾಸಾಬ್ ದರ್ಗಾದ ಪ್ರಮುಖ ಅರ್ಚಕ ಬಂದಿಗಿಸಾಬ್ ಲಾಳೆಸಾಬ್ ಮುಜಾವರ್, ಹಿರಿಯ ಮುಖಂಡ ಶೇಖ್ ಚಾಂದ್ ಮುಜಾವರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಹೆಬೂಬ್ ಮುಜಾವರ್, ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಅಫಜಲಪುರ ತಾಲ್ಲೂಕಿನ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಶರಣಪ್ಪ ದತ್ತಪ್ಪ ವಡಗೇರಿ ಹಾಗೂ ಮೆಲೋಡಿಯಸ್ ನ ಗಾಯಕ ಮಹೇಶ್ ಚಿಂತನಪಳ್ಳಿ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಮಹೇಶ್ ವಡಗೇರಿ, ವಿಜಯಕುಮಾರ್ ವಡಗೇರಿ, ಶಿವಶರಣ ವಡಗೇರಿ, ರಾಕೇಶ್ ವಡಗೇರಿ, ಅತ್ರಿಕುಮಾರ್ ವಡಗೇರಿ, ಭಾಗಪ್ಪ ವಡಗೇರಿ, ಮಡಿವಾಳ್ ವಡಗೇರಿ, ಅನಿಲ್ ವಡಗೇರಿ, ಸಚಿನ್ ಸಿಂದಗಿ ಮುಂತಾದವರು ಪಾಲ್ಗೊಂಡಿದ್ದರು.

Share This Article
Leave a Comment