ಕಲಬುರ್ಗಿ, ಜೂ.೧೩- ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೀರ್ಘ ಕಾಲದ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ೩೭೧ನೇ ಜೇ ಕಲಂ ಜನೆವರಿ ೨೦೧೩ ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜಾರಿಯಾಗಿದೆ. ೩೭೧ನೇ ಜೇ ಕಲಂ ಅಸ್ತಿತ್ವ ಮತ್ತು ನಮ್ಮ ಹಕ್ಕು ಹಾಗೂ ಸಂವಿಧಾನದ ಬದ್ದ ಉಳಿಸಿಕೊಳ್ಳಲು ಹಾಗೂ ಈ ಐತಿಹಾಸಿಕ ದಿನಾಚರಣೆ ಆಚರಿಸಲು ಪ್ರತಿ ವರ್ಷ ಜನೆವರಿ ೧ರಂದು ೩೭೧ನೇ ಜೇ ಕಲಂ ಆಚರಣೆ ಮಾಡಲು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ದೇಶಮುಖ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿಯವರು ಮಂಡಿಸಿದ ಪ್ರಸ್ತಾವನೆಗೆ ಸರ್ವಾನುಮತದಿಂದ ನಿರ್ಣಯ ಮಾಡಲಾಯಿತು.
ಅದೆ ರೀತಿಯಾಗಿ ೩೭೧ನೇಜೇ ಕಲಂ ಸಾಧನೆ ಮತ್ತು ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದು ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಮತ್ತು ಶಾಸಕರು ಆದ ಶಶೀಲ್ ನಮೋಶಿ, ಬಿ.ಜಿ . ಪಾಟೀಲ್, ಅಬ್ದುಲ್ ಹಮೀದ್, ಬೀದರಿನ ಡಾ. ರಜನೀಶ್ ವಾಲಿ, ಪಂಡಿತ್ ಚಿದ್ರಿ, ಡಾ. ಸನಾವೂಲ್ಲಾ,ಪ್ರೊ. ಪ್ರತಾಪ್ ಸಿಂಗ್, ಕಲ್ಯಾಣ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಶರಣು ಪಪ್ಪಾ, ಆರ್.ಕೆ. ಹುಡುಗಿ, ಸೆಂಟ್ ಮೇರಿ ಸಂಸ್ಥೆ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಂಸ್ಥೆಗಳ ಪ್ರಮುಖರು, ಮೂವತ್ತು ಕಾಲೇಜುಗಳ, ವಿವಿಗಳ ಪ್ರಮುಖರು ಭಾಗವಹಿಸಿದ್ದರು.