ಸೇಡಂ: ತಾಲೂಕಿನ ಹುಡಾ (ಎಂ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಶಾಲಾ ಪ್ರಾರಂಭೋತ್ಸವದ ನೆನಪಿನ ಕಾಣಿಕೆಯಾಗಿ ಮಾಜಿ APMC ಅಧ್ಯಕ್ಷರು ಗುರುನಾಥ್ ರೆಡ್ಡಿ ಪಾಟೀಲ್ ಹುಡಾ (ಎಂ) ಅವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಿ, ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ವಿಶಿಷ್ಟವಾಗಿ ಪ್ರೋತ್ಸಾಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರು ಮಾತನಾಡಿ, “ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಾರ್ವಜನಿಕರ ಮತ್ತು ದಾನಿಗಳ ಸಹಕಾರ ಅತ್ಯಗತ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂತಹ ನೆರವು ನೀಡುವುದು ಶ್ಲಾಘನೀಯ” ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ; ಮುರಳಿಧರ ರೆಡ್ಡಿ ಸ.ಹಿ.ಪ್ರಾ.ಶಾಲೆ ಜನತಾ ಕಾಲೋನಿ ಹುಡಾ (ಎಂ) ಶಾಲೆ ಮುಖ್ಯ ಗುರುಗಳಾದ ಉಮಾಕಾಂತ, ಯಲ್ಲಪ್ಪ ಪೂಜಾರಿ, ರಮೇಶ್ ಕಡಗಂಚಿ, ಮುದೋಳ ಸಿ.ಆರ್.ಪಿ ಶರಣಪ್ಪ ಪರಮಾ, ಶಾಲೆ ಸಹ ಶಿಕ್ಷಕರಾದ ಕೌಸರ್ ಬೇಗಮ್, ಜ್ಯೋತಿ, ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕೋಕಿಲ್ (*SDMC*) ಅಧ್ಯಕ್ಷರು ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಊರಿನ ಪ್ರಮುಖ ಗಣ್ಯರು ಇದರು, ಜಾಕನಪಲ್ಲಿ, ಇಂಜಳಿ, ನಾಡೇಪಲ್ಲಿ, ಕನ್ಯಾ ಪ್ರೌಢ ಶಾಲೆ, ಸ. ಹಿ. ಪ್ರಥಮಿಕ ಶಾಲೆ ನಂಬರ 2, ಎಂ ಪಿ ಎಸ್, ಸೇರಿ ನಗರ ಹಾಗೂ ಗ್ರಾಮಗಳಲ್ಲಿ ಮಕ್ಕಳಿಗೆ ಹೂ ಭೂಚ್ ನೀಡಿ, ಉಚಿತ ಪೇನ್, ಬೂಕ್ ವಿಚರಿಸಿ ಸ್ವಾಗತಿಸಿದರು ಕ್ಷಣ ಕಂಡು ಬಂತು ಹೊಸ ಬಟ್ಟೆ, ಹೂ ಮುಡಿದು ಶಾಲೆಗೆ ಬಂದ ಮಕ್ಕಳಿಗೆ ಉಚಿತ ಪುಸ್ತಕ, ಪೆನ್, ಅತ್ಯಂತ ಉತ್ಸಾಹದಿಂದ ತರಗತಿಗಳಿಗೆ ಹೆಜ್ಜೆ ಇಟ್ಟರು.