೮ ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರ ಬಂಧನ

ಕಲಬುರ್ಗಿ, ಜೂ.೧೩- ಜಿಲ್ಲೆಯ ವಾಡಿ ಠಾಣೆಯ ಪೋಲಿಸರು ಕಳೆದ ೮ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಚಿತ್ತಾಪುರ ತಾಲ್ಲೂಕಿನ ಕಡಬೂರ್ ಗ್ರಾಮದ ಅಹ್ಮದ್ ಷಾ ತಂದೆ ಮಹಿಬೂಬ್ ಷಾ (೪೩) ಹಾಗೂ ಚಿತ್ತಾಪುರ ತಾಲ್ಲೂಕಿನ ನಾಲವಾರ್ ಸ್ಟೇಷನ್‌ನ ನಿವಾಸಿ ನಿಂಗಪ್ಪ ತಂದೆ ಚೌಡಪ್ಪ (೩೬) ಎಂದು ಗುರುತಿಸಲಾಗಿದೆ.

ಅಹ್ಮದ್ ಷಾ ತಂದೆ ಮಹಿಬೂಬ್ ಕಳೆದ ೨೦೧೦ರ ಏಪ್ರಿಲ್ ೨೯ರಂದು ಹಲಕರ್ಟಿ ಸೀಮಾಂತರದ ವಾಡಿ-ಯಾದಗಿರ ಮುಖ್ಯ ರಸ್ತೆಯ ಮೇಲೆ ದರೋಡೆ ಮಾಡಲು ಹೊಂಚು ಹಾಕಿದ ಪ್ರಕರಣದಲ್ಲಿ ಭಾಗಿಯಾದ ಸದರಿ ಆರೋಪಿತನು ಸುಮಾರು ೮ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನಾಗಿರುತ್ತಾನೆ, ಸದರಿಯವನಿಗೆ ಬೆಂಗಳೂರಿನಲ್ಲಿ ಪತ್ತೆ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಅದೇ ರೀತಿ ನಿಂಗಪ್ಪ ತಂದೆ ಚೌಡಪ್ಪನು ಯಾವುದೆ ಪರವಾನಗೆ ಇಲ್ಲದೆ ಅಕ್ರಮ ಶಸ್ತ್ರಾಸ್ತ್ರ, ತಯಾರಿಕೆ ಮಾಡುವ ಪ್ರಕರಣದಲ್ಲಿ ಭಾಗಿಯಾದ ಸುಮಾರು ೦೮ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿತನಾಗಿದ್ದು, ಸದರಿ ಆರೋಪಿತನನ್ನು ಪತ್ತೆ ಮಾಡಿ ನ್ಯಾಯಾಂಗ ಬಂಧನ ಕುರಿತು ಕಳಿಸಲಾಗಿದೆ. ಸದರಿ ಆರೋಪಿತರನ್ನು ಪತ್ತೆ ಮಾಡಿದ್ದು ಇಬ್ಬರು ಆರೋಪಿತರು ಅತಿ ಮುಖ್ಯವಾದ ಪ್ರಕರಣಗಳಾದ ಡಕಾಯತಿ ಮಾಡಲು ಹೊಂಚು ಹಾಕಿದ ಮತ್ತು ಅಕ್ರಮ ಶಸ್ತ್ರಾಸ್ತ್ರ ಹಾಗೂ ಬಂದೂಕು ತಯಾರಿಸುವಂತಹ ಅತಿ ಪ್ರಮುಖ ಪ್ರಕರಣಗಳಲ್ಲಿ ೮ ವರ್ಷಗಳಿಂದ ಯಾರಿಗೂ ಸಿಗದೆ ತಲೆಮರೆಸಿಕೊಂಡಿದ್ದರು.

ಶಹಾಬಾದ್ ಆರಕ್ಷಕ ಉಪಾಧೀಕ್ಷಕ ಶಂಕರಗೌಡ ವಿ. ಪಾಟೀಲ್, ಸಿಪಿಐ ಪಾಟೀಲ್, ಪಿಎಸ್‌ಐಗಳಾದ ತಿರುಮಲೇಶ್, ಶ್ರೀಮತಿ ರೇಣುಕಾ, ಎಎಸ್‌ಐ ಮೊಹ್ಮದ್ ಯೂಸುಫ್, ಸಿಬ್ಬಂದಿಗಳಾದ ಸುರೇಶ್, ಬಸವಲಿಂಗಪ್ಪ, ಸಂಗಮೇಶ್, ಮಾಪಣ್ಣ ಅವರು ಆರೋಪಿತರ ಪತ್ತೆ ಕುರಿತು ಬೆಂಗಳೂರ, ಯಾದಗಿರ, ಕಲಬುರ್ಗಿ, ನಾಲವಾರ, ಕುಂಬಾರಹಳ್ಳಿ, ಸನ್ನತಿ, ವಾಡಿ ಪಟ್ಟಣ ಮುಂತಾದ ಕಡೆಗಳಲ್ಲಿ ಹುಡುಕಾಡಿ ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದು, ಕಾರ್ಯಾಚರಣೆಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.

Share This Article
Leave a Comment