ಬೀದರ್, ಮೇ.೨೦- ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ೩ ವರ್ಷ ಅವಧಿ ಮುಗಿಸಿ, ಸಾಧನಾ ಸಮಾವೇಶ ಮಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ, ಈಗಾಗಲೆ ರಾಜ್ಯದಲ್ಲಿ ಅಭಿವೃದ್ದಿ ಇಲ್ಲದೆ, ಸರ್ಕಾರಿ ನೌಕರರಿಗೆ ಸಂಬಳ ನೀಡದೆ, ರೈತರ ಸಂಕಷ್ಟ ಅರಿಯದೆ, ಹಿಂದೆAದೂ ಕಾಣದಷ್ಟು ರಾಜ್ಯವು ದಿವಾಳಿಯಾಗಿದ್ದು, ಭ್ರಷ್ಟಾಚಾರ ಮೀತಿ ಮಿರಿದ್ದು, ರಾಜ್ಯವನ್ನು ದಿವಾಳಿ ಮಾಡಿರುವುದೇ ಇವರ ಸರ್ಕಾರ ಸಾಧನೆಯಾಗಿದೆ, ಇವರು ಸಾಧನಾ ಸಮಾವೇಶದ ಬದಲು ದಿವಾಳಿ ಸಮಾವೇಶ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ವ್ಯಂಗವಾಡಿದ್ದಾರೆ.
ರಾಜ್ಯದಲ್ಲಿ ೨೮೦೯, ಜಿಲ್ಲೆಯಲ್ಲಿ ೧೮೧ ರೈತರ ಆತ್ಮಹತ್ಯೆಯಾಗಿದ್ದು, ಈ ರೈತರ ಆತ್ಮಹತ್ಯೆಗಳು ಇವರ ಸರ್ಕಾರದ ಸಾಧನೆಯಾಗಿದೆ, ಗ್ಯಾರಂಟಿ ಹೆಸರಲ್ಲಿ ದಲಿತರ ಹಣ ದುರ್ಬಳಕೆ , ೨.೫ ಲಕ್ಷಕ್ಕು ಅಧಿಕ ಹುದ್ದೆ ಖಾಲಿ, ಇಡಿ ರಾಜ್ಯದಲ್ಲಿ ಜೂಜು ಧಂಧೆ, ಡಗ್ಸ್ ಧಂದೆ, ಸುಲಿಗೆ, ಕೊಲೆ ಪ್ರಕರಣಗಳು ಹೆಚ್ಚಾಗಿವೆ, ನೀರಾವರಿ ಯೋಜನೆಗಳಿಗೆ ಅನುದಾನವಿಲ್ಲಾ, ಕೇಂದ್ರದ ಯೋಜನೆಗಳಿಗೆ ಅನುದಾನವಿಲ್ಲಾ, ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯವಿಲ್ಲಾ, ವಿದ್ಯುತ್ ದರ ಹೆಚ್ಚಳ, ಸ್ಟಾö್ಯಂಪ ಡ್ಯೂಟಿ ಹೆಚ್ಚಳ, ಎಲ್ಲಾ ವಸ್ತುಗಳ ಬೆಲೆ ಏರಿಕೆ ಮತ್ತು ಅನ್ನದಾತರ ಕಷ್ಟಗಳಿಗೆ ಸ್ಪಂದನೆ ಇಲ್ಲಾ, ಇಂತಹ ಸರ್ಕಾರಕ್ಕೆ ಸಾಧನಾ ಸಮಾವೇಶ ಏತಕ್ಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ತನ್ನ ವಿಫಲತೆ ಮುಚ್ಚಿಕೊಳ್ಳಲು ಮೋದಿ ಸರ್ಕಾರದ ಮೇಲೆ ಬೊಟ್ಟು ಮಾಡೊದು ಬಿಡಬೇಕು, ಮೋದಿಯವರು ಏನೆ ಮಾಡಿದರು ಅದರಲ್ಲಿ ಯಾವ ಸ್ವಾರ್ಥವು ಇರುವುದಿಲ್ಲಾ, ಕೇವಲ ದೇಶದ ಹಿತ ಇರುತ್ತದೆ ಅದನ್ನು ಅರ್ಥ ಮಾಡಿಕೊಳ್ಳಬೇಕು, ರಾಜ್ಯದಲ್ಲಿ ಕಳೆದ ೩ ವರ್ಷದಿಂದ ಜನರು ಕೇವಲ ಸಂಕಷ್ಟದಲ್ಲಿದ್ದಾರೆ, ಆದರೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಮುಖ್ಯಮಂತ್ರಿ ಕುರ್ಚಿಗಾಗಿ ಜಗಳ ಆಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಕಳೆದ ೩ ವರ್ಷದಿಂದ ಬೀದರ ಜಿಲ್ಲೆಯ ಉಸ್ತುವಾರಿ ಈಶ್ವರ ಖಂಡ್ರೆ ಅವರ ಸಾಧನೆಯೂ ಶೂನ್ಯ, ಕೇವಲ ಮಾತಾಡುವುದು, ಸುಳ್ಳು ಆಶ್ವಾಸನೆ ಕೊಡುವುದು, ಅನ್ಯಾಯದ ವಿರುದ್ದ ಧ್ವನಿ ಎತ್ತುವವರ ಮೇಲೆ ಸುಳ್ಳು ಪ್ರಕರಣಗಳು ಹಾಕಿಸುವುದು ಮಾಡುವುದು ಬಿಟ್ಟರೆ ಏನು ಸಾಧನೆ ಮಾಡಿಲ್ಲಾ, ಬಿ.ಎಸ್.ಎಸ್.ಕೆ ಇಲ್ಲಿಯವರೆಗೆ ಪ್ರಾರಂಭಿಸಿಲ್ಲಾ, ಒಂದು ನಯಾ ಪೈಸೆ ಅನುದಾನ ಬಿ.ಎಸ್.ಎಸ್.ಕೆಗೆ ಕೊಡಿಸಿಲ್ಲಾ, ನಾನು ಕೇಂದ್ರದಲ್ಲಿ ಮಂತ್ರಿಯಿದ್ದಾಗ ಮಂಜೂರಿ ಮಾಡಿಸಿದ್ದ ಸಿಪೇಟ್ ಕಾಲೇಜಿಗೆ, ಬೀದರ ನಾಂದೇಡ್ ರೈಲಿಗೆ ರಾಜ್ಯದಿಂದ ಅನುದಾನ ಕೊಟ್ಟಿಲ್ಲಾ, ಜಿಲ್ಲಾಡಳಿತ ಇವರ ಕೈಯಲ್ಲಿ ಇಲ್ಲ. ಇವರ ಮಾತು ಯಾವ ಅಧಿಕಾರಿಗಳು ಕೇಳ್ತಾ ಇಲ್ಲಾ, ಜನ ಸಾಮಾನ್ಯರ ಒಂದು ಕೆಲಸವು ಆಗ್ತಿಲ್ಲಾ, ಕಳೆದ ೩ ವರ್ಷದಿಂದ ಬೀದರ ಜಿಲ್ಲೆಯ ಜನರು ಹೈರಾಣದಲ್ಲಿದ್ದಾರೆ. ಎ.ಟಿ.ಎಮ್ ಲೂಟಿಯಾಗಿದ್ದು ಇಲ್ಲಿಯವರೆಗೆ ಕಳ್ಳರು ಸಿಕ್ಕಿಲ್ಲಾ, ಜಿಲ್ಲೆಯಲ್ಲಿ ಇಸ್ಪಿಟ್, ಮಟಕಾ ಕ್ಲಬ್ಗಳು ನಡೆಯುತ್ತಿದ್ದು, ಉಸ್ತುವಾರಿ ಸಚಿವರ ಆಪ್ತರೆ ಅಕ್ಕಿ ಕಳ್ಳ ಸಾಗಾಣೆಯಲ್ಲಿ ತೊಡಗಿದ್ದು ಇವುಗಳನ್ನು ಉಸ್ತುವಾರಿ ಮಂತ್ರಿಯಿAದ ನಿಯಂತ್ರಿಸಲು ಆಗುತ್ತಿಲ್ಲ. ಬೆಸಿಗೆಯಲ್ಲಿ ೬೦% ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿತ್ತು, ಆದರೆ ಖಂಡ್ರೆ ಕೇವಲ ಸಭೆ ತೆಗೆದುಕೊಂಡು ಕೈ ತೊಳೆದುಕೊಂಡರು, ಇವರೊಬ್ಬ ನಿಷ್ಕಿçÃಯ ಉಸ್ತುವಾರಿ ಸಚಿವ ಎಂದರೆ ತಪ್ಪಾಗಲಾರದು ಎಂದು ಅವರು ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಕಾಂಗ್ರೇಸ್ ಸರ್ಕಾರದಿಂದ ಜನರು ಬೆಸತ್ತಿದ್ದಾರೆ, ಈ ಸರ್ಕಾರದಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ, ಯಾವಾಗ ಚುನಾವಣೆ ಬರುತ್ತೊ, ಹೊಸ ಸರ್ಕಾರ ತರಲು ಕಾಯುತ್ತಿದ್ದಾರೆ ಅಷ್ಟೊಂದು ಬೇಜಾರಾಗಿದ್ದಾರೆ ನಮ್ಮ ಜನರು ಎಂದು ಮಾಜಿ ಸಚಿವ ಭಗವಂತ ಖೂಬಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.