ಸಚಿವ ಖಂಡ್ರೆಯವರಿಗೆ ಹೋರಾಟಗಾರರ ಸನ್ಮಾನ: ಕಲ್ಯಾಣದ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಲು ಆಗ್ರಹ

 

ಬೆಂಗಳೂರು, ಜೂ.೯- ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸವರಾಜ್ ದೇಶಮುಖ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಕಲ್ಯಾಣ ಕರ್ನಾಟಕದಿಂದ ನೂತನ ಸಚಿವರಾಗಿದ್ದ, ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್, ಈಶ್ವರ ಖಂಡ್ರೆ ರವರಿಗೆ ಭೇಟಿಯಾಗಿ ಕಲ್ಯಾಣದ ಅಭಿವೃದ್ಧಿಗೆಯ ಬಗ್ಗೆ ಬದ್ಧತೆ ಪ್ರದರ್ಶಿಸಲು ಒತ್ತಾಯಿಸುವ ಮೂಲಕ ನೂತನ ಸಚಿವರಿಗೆ ಗೌರವ ಸನ್ಮಾನ ಮಾಡಲಾಯಿತು.

ನೂತನ ಸಚಿವರಾಗಿ ಬೃಹತ್ ಇಲಾಖೆಯಾದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಹೊಂದಿರುವ ಈಶ್ವರ ಖಂಡ್ರೆಯವರಿಗೆ ಅವರ ನಿವಾಸದಲ್ಲಿ ಭೇಟಿಯಾಗಿ ಮುಖ್ಯಮಂತ್ರಿಗಳು ಅವರಿಗೆ ನೀಡಿರುವ ದೊಡ್ಡ ಖಾತೆಗೆ ಅನುಗುಣವಾಗಿ ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಕ್ಷೇತ್ರದಲ್ಲಿ ವಿಶೇಷ ಅಭಿವೃದ್ಧಿ ಮಾಡಲು ಕ್ರಾಂತಿಕಾರಿ ಹೆಜ್ಜೆಗಳನ್ನು ಇಡಬೇಕೆಂದು ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಲಕ್ಷ್ಮಣ ದಸ್ತಿ, ಪ್ರೊ. ಆರ್.ಕೆ. ಹುಡಗಿಯವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೀದರ್‌ನ ವಿನಯ ಮಾಳಗೆ, ಪ್ರಶಾಂತ, ಶಿವಶರಣಪ್ಪ, ವಿಜಯಕುಮಾರ್ ದೇಶಪಾಂಡೆ, ರವೀಂದ್ರಕುಮಾರ್, ಮಹೇಶಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment