ಕಲಬುರ್ಗಿಯ ಹಲವು ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆ: ಹಲವರ ಬಂಧನ, ವಿದ್ಯಾರ್ಥಿನಿ ಸೇರಿ ಹೊರ ರಾಜ್ಯಗಳ ಮಹಿಳೆಯರ ರಕ್ಷಣೆ..!

 

ಕಲಬುರ್ಗಿ, ಜೂ.೨- ನಗರದ ಹಲವು ಲಾಡ್ಜ್ಗಳಲ್ಲಿ ವೇಶ್ಯಾವಾಟಿಕೆಯನ್ನು ಪೋಲಿಸರು ಪತ್ತೆ ಹಚ್ಚಿದ್ದು, ವಿದ್ಯಾರ್ಥಿನಿ ಹಾಗೂ ಮಹಿಳೆಯರನ್ನು ರಕ್ಷಿಸಿ, ಹಲವರನ್ನು ಬಂಧಿಸಿದ್ದಾರೆ.

ನಗರದ ಸ್ಟೇಷನ್ ಬಜಾರ್ ಠಾಣೆಯ ಪಿಐ ಜಿ.ಎಂ. ಪಾಟೀಲ್ ಅವರು ಸಿಬ್ಬಂದಿಗಳಾದ ಪ್ರಭಾಕರ್, ಮೋಶಿನ್, ಕಲ್ಲಣ್ಣ, ಜ್ಯೋತಿ, ರೇಖಾ, ಭಾಗ್ಯಶ್ರೀ ಹಾಗೂ ಪಂಚರೊಂದಿಗೆ ಖಚಿತ ಭಾತ್ಮಿ ಮೇರೆಗೆ ಅಪ್ಪರ್ ಲೈನ್‌ನ ಸ್ಟೇಷನ್ ರಸ್ತೆಯಲ್ಲಿರುವ ಅಭಿಮಾನ ಲಾಡ್ಜ್ ಮೇಲೆ ದಾಳಿ ಮಾಡಿದಾಗ ವೇಶ್ಯಾವಾಟಿಕೆ ಪತ್ತೆಯಾಗಿದೆ.

ಲಾಡ್ಜ್ನ ಕೋಣೆ ೨೦೮ರಲ್ಲಿ ಬಾಗಿಲು ಬಡಿದು ಪೋಲಿಸರು ತೆರೆಸಿದಾಗ ಇಬ್ಬರು ಅರೆನಗ್ನ ಆವಸ್ಥೆಯಲ್ಲಿ ಇದ್ದರು. ಯಡ್ರಾಮಿ ತಾಲ್ಲೂಕಿನ ಮಂಗಳೂರಿನ ವಿದ್ಯಾರ್ಥಿ ವಿಜಯಕುಮಾರ್ ತಂದೆ ಸಿದ್ದಪ್ಪ ಕಟ್ಟಿಮನಿ (೨೧) ಎಂಬಾತನು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದನ್ನು ಒಪ್ಪಿಕೊಂಡ.

ಲಾಡ್ಜ್ ಮ್ಯಾನೇಜರ್ ವಿಜಯಕುಮಾರ್ ಕಟ್ಟಿಮನಿ ಪರಿಚಯವಿದ್ದು, ಬೇರೆ, ಬೇರೆ ಕಡೆಗಳಿಂದ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಕರೆಯಿಸಿದಾಗ ನನಗೆ ಕರೆ ಮಾಡಿ ತಿಳಿಸುತ್ತಿದ್ದರು. ಅದೇ ರೀತಿ ಈಗಲೂ ಸಹ ಒಬ್ಬ ಯುವತಿಯನ್ನು ಕರೆಸಿ ಮಾಹಿತಿ ಕೊಟ್ಟಿದ್ದು, ಒಂದು ಬಾರಿ ಲೈಂಗಿಕ ಕ್ರಿಯೆಗೆ ೧೦೦೦ರೂ.ಗಳನ್ನು ತೆಗೆದುಕೊಳ್ಳುತ್ತಾರೆ. ಒಳಗಡೆ ಹೋಗುವಾಗ ಹಣ ಲಾಡ್ಜ್ ಮ್ಯಾನೇಜರ್ ಕೈಯಲ್ಲಿ ಕೊಟ್ಟು ಹೋಗಬೇಕು ಎಂದು ತಿಳಿಸಿದ್ದು, ಅದೇ ರೀತಿ ೧೦೦೦ರೂ.ಗಳನ್ನು ಕೊಟ್ಟಿದ್ದಾಗಿ ವಿಜಯಕುಮಾರ್ ಕಟ್ಟಿಮನಿ ಪೋಲಿಸರಿಗೆ ವಿಚಾರಣೆಯ ವೇಳೆ ವಿವರಿಸಿದ. ವಿಜಯಕುಮಾರ್ ಕಟ್ಟಿಮನಿ ಜೊತೆಗೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಫಜಲಪುರ ತಾಲ್ಲೂಕಿನ ಕರ್ಜಗಿಯ ೨೦ ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ಪೋಲಿಸರು ವಿಚಾರಿಸಿದಾಗ ಲಾಡ್ಜ್ ಮಾಲಿಕ ಪ್ರವೀಣ್ ಶೆಟ್ಟಿ ಮತ್ತು ಲಾಡ್ಜ್ ಮ್ಯಾನೇಜರ್ ಜಗನ್ನಾಥ ತಂದೆ ಸಿದ್ದಲಿಂಗ ಪಾಟೀಲ್ ಅವರು ಕೆಲಸ ಕೊಡಿಸುವುದಾಗಿ ಹೇಳಿ ಕರೆಸಿ ನನಗೆ ವೇಶ್ಯಾವಾಟಿಕೆಯಲ್ಲಿ ತೊಡಗಲು ಹೇಳಿ ಒಬ್ಬ ಗಿರಾಕಿಯಿಂದ ೩೦೦ರೂ.ಗಳನ್ನು ಕೊಡಿಸುವುದಾಗಿ ಹೇಳಿದರು ಎಂದು ತಿಳಿಸಿದಳು. ಯುವತಿಯನ್ನು ಪೋಲಿಸರು ತಪಾಸಣೆ ಮಾಡಿದಾಗ ಆಕೆಯ ಹತ್ತಿರ ೩೦೦ರೂ.ಗಳು, ಬಳಸದೇ ಇದ್ದ ಎರಡು ಕಾಂಡೋಮ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ವಶಪಡಿಸಿಕೊಂಡರು. ನೊಂದ ಮಹಿಳೆಯನ್ನು ರಕ್ಷಿಸಿ ಮಹಿಳಾ ನಿಲಯಕ್ಕೆ ಕಳಿಸಿದರು. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅದೇ ರೀತಿ ವೆಂಕಟೇಶ್ ಲಾಡ್ಜ್ನ ರೂಮ್ ನಂಬರ್ ೧೦೧ರಲ್ಲಿ ಖಚಿತ ಭಾತ್ಮಿ ಮೇರೆಗೆ ಪೋಲಿಸರು ದಾಳಿ ಮಾಡಿದಾಗ ಓರ್ವ ವ್ಯಕ್ತಿ ಹಾಗೂ ಓರ್ವ ಮಹಿಳೆ ಪತ್ತೆಯಾದರು. ಅವರನ್ನು ವಿಚಾರಿಸಿದಾಗ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಾಜಲದಿನ್ನಿಯ ಶಂಕರಗೌಡ ತಂದೆ ಶಾಂತಗೌಡ ಮಾಲಿಪಾಟೀಲ್ (೨೪) ಎಂದು ಹೇಳಿದ್ದು, ಲಾಡ್ಜ್ ಮ್ಯಾನೇಜರ್ ರಾಜಕುಮಾರ್ ಕಾಂಬಳೆ ಪರಿಚಯವಿದ್ದು, ಬೇರೆ, ಬೇರೆ ಕಡೆಗಳಿಂದ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಕರೆಸಿದಾಗ ನನಗೆ ಕರೆ ಮಾಡಿ ತಿಳಿಸುತ್ತಿದ್ದರು. ಒಂದು ಬಾರಿ ಲೈಂಗಿಕ ಕ್ರಿಯೆಗೆ ೧೦೦೦ರೂ.ಗಳನ್ನು ತೆಗೆಗದುಕೊಳ್ಳುತ್ತಿದ್ದರು ಎಂದು ಹೇಳಿದ. ಮಹಿಳೆಗೆ ವಿಚಾರಿಸಿದಾಗ ಆಕೆಯೂ ಸಹ ದೇವದುರ್ಗ ತಾಲ್ಲೂಕಿನ ಅಣವಾರದ ನಿವಾಸಿಯಾಗಿದ್ದು, ೨೫ ವರ್ಷ ವಯಸ್ಸು ಹೊಂದಿದ್ದು, ಕೆಲಸ ಕೊಡಿಸುವುದಾಗಿ ಹೇಳಿ ಲಾಡ್ಜ್ ಮಾಲಿಕ ಮಹೇಶ್ ಗುತ್ತೇದಾರ್ ಹಾಗೂ ಲಾಡ್ಜ್ ಮ್ಯಾನೇಜರ್ ರಾಜಕುಮಾರ್ ಕಾಂಬಳೆ ಅವರು ನನಗೆ ಕರೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಲು ಹೇಳಿದರು. ಒಬ್ಬ ಗಿರಾಕಿಯಿಂದ ೩೦೦ರೂ.ಗಳನ್ನು ಕೊಡಿಸುವುದಾಗಿ ಹೇಳಿದ್ದರು ಎಂದು ತಿಳಿಸಿದಳು. ಆಕೆಯನ್ನು ತಪಾಸಣೆ ಮಾಡಿದಾಗ ಆಕೆಯ ಹತ್ತಿರ ೩೦೦ರೂ.ಗಳು ಹಾಗೂ ಎರಡು ಕಾಂಡೋಮ್ ಪ್ಯಾಕೆಟ್‌ಗಳು ಪತ್ತೆಯಾದವು. ಆಕೆಯನ್ನು ರಕ್ಷಿಸಿ ಮಹಿಳಾ ನಿಲಯಕ್ಕೆ ಕಳಿಸಲಾಗಿದ್ದು, ಈ ಕುರಿತು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಅದೇ ರೀತಿ ವೆಂಕಟೇಶ್ ಲಾಡ್ಜ್ನ ೧೦೨ನೇ ರೂಮ್‌ನಲ್ಲಿ ಸಹ ವೇಶ್ಯಾವಾಟಿಕೆ ಪತ್ತೆಯಾಗಿದೆ. ಆರೋಪಿಯನ್ನು ಕಮಲಾಪುರ ತಾಲ್ಲೂಕಿನ ಸೊಂತ್ ಗ್ರಾಮದ ರುಕದ್ಕೋದ್ದೀನ್ ತಂದೆ ಶಬ್ಬೀರ್ ಹರಸೂರ್ (೩೮) ಗೌಂಡಿ ಎಂದು ಗುರುತಿಸಲಾಗಿದ್ದು, ಲಾಡ್ಜ್ ಮ್ಯಾನೇಜರ್ ರಾಜಕುಮಾರ್ ಕಾಂಬಳೆ ಪರಿಚಯವಿದ್ದು, ವೇಶ್ಯಾವಾಟಿಕೆಗೆ ಕರೆಸುತ್ತಿದ್ದರು. ಒಂದು ಬಾರಿ ಲೈಂಗಿಕ ಕ್ರಿಯೆಗೆ ೧೦೦೦ರೂ.ಗಳನ್ನು ಪಡೆಯುತ್ತಿದ್ದರು ಎಂದು ತಿಳಿಸಿದ. ಮಹಿಳೆಯನ್ನು ವಿಚಾರಿಸಿದಾಗ ಪಟವಾರ್ ಗ್ರಾಮದ ೪೦ ವರ್ಷ ವಯಸ್ಸಿನ ಮಹಿಳೆಯಾಗಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಲಾಡ್ಜ್ನವರು ವೇಶ್ಯಾವಾಟಿಕೆ ಮಾಡಿಸುತ್ತಿದ್ದರು. ಒಬ್ಬ ಗಿರಾಕಿಯಿಂದ ೨೦೦ರೂ.ಗಳನ್ನು ಕೊಡಿಸುತ್ತಿದ್ದರು ಎಂದು ತಿಳಿಸಿದಳು. ಮಹಿಳೆಯನ್ನು ತಪಾಸಣೆ ಮಾಡಿದಾಗ ಆಕೆಯ ಹತ್ತಿರ ೨೦೦ರೂ.ಗಳು ಮತ್ತು ಒಂದು ಕಾಂಡೋಮ್ ಪ್ಯಾಕೆಟ್‌ಗಳು ಪತ್ತೆಯಾಗಿದ್ದು, ವಶಪಡಿಸಿಕೊಂಡರು. ನೊಂದ ಮಹಿಳೆಯನ್ನು ಮಹಿಳಾ ನಿಲಯಕ್ಕೆ ಕಳಿಸಲಾಗಿದೆ.

ನಗರದ ಬಸ್ ನಿಲ್ದಾಣದ ಮುಂದುಗಡೆ ಇರುವ ಕಮಲ್ ಹೊಟೇಲ್ ಬಳಿ ಇರುವ ಬಿಲ್ಡಿಂಗ್‌ದಲ್ಲಿನ ಮೊದಲನೇ ಮಹಡಿಯಲ್ಲಿರುವ ಕಾವೇರಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುವುದನ್ನು ಅಶೋಕ ನಗರ ಠಾಣೆಯ ಪೋಲಿಸರು ಬಂಧಿತರನ್ನು ಪತ್ತೆಹಚ್ಚಿದ್ದಾರೆ.

ಪಿಐ ಸತೀಶ್ ಎನ್. ಕಣಿಮೇಶ್ವರ್ ಹಾಗೂ ಸಿಬ್ಬಂದಿಗಳಾದ ನೀಲಕಂಠರಾಯ್ ಪಾಟೀಲ್, ವೈಜನಾಥ, ಶಿವಪ್ರಕಾಶ್, ಚಂದ್ರಶೇಖರ್, ಸಿಕ್ರೇಶ್ವರ್, ಮಹಿಳಾ ಸಿಬ್ಬಂದಿ ಶ್ರೀಮತಿ ಕೊಟ್ರೆಮ್ಮಾ, ಶ್ರೀಮತಿ ನಳಿನಿಕುಮಾರಿ ಅವರೊಂದಿಗೆ ಕಾರ್ಯಾಚರಣೆ ಕೈಗೊಂಡು ಲಾಡ್ಜ್ನ ೧೦೮ರ ಕೋಣೆಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ವಿಟ ನಗರದ ಶಮಶಾನ್ ಘಾಟ ಹತ್ತಿರದ ಮುಸ್ಲಿಂ ಸಂಘದ ನಿವಾಸಿ ಹಾಗೂ ಚಾಲಕ ಇಸ್ರಾರ್ ಖುರೇಷಿ ತಂದೆ ಗುಲಾಮ್ ರಸೂಲ್ ಖುರೇಷಿ (೨೩) ಎಂಬಾತನನ್ನು ವಶಕ್ಕೆ ಪಡೆದರು. ಆತನೊಂದಿಗೆ ಇದ್ದ ಮಹಿಳೆಯು ತಾನು ಪಶ್ಚಿಮ್ ಬಂಗಾಳದ ಕೊಲ್ಕೊತ್ತಾದ ಸಿಯಲದಾರಾ ಪ್ರದೇಶದ ನಿವಾಸಿಯಾಗಿದ್ದು, ೨೪ ವರ್ಷ ವಯಸ್ಸು ಹೊಂದಿರುವೆ ಎಂದು ತಿಳಿಸಿದ್ದು, ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ಆಕೆಯ ಹತ್ತಿರ ೫೦೦ರೂ.ಗಳು ಮತ್ತು ಒಂದು ಪ್ಯಾಕೆಟ್ ಕಾಂಡೂಮ್‌ಗಳು ಪತ್ತೆಯಾದವು.

ಕಾವೇರಿ ಲಾಡ್ಜ್ನ ಮಾಲಿಕ ಮಾತಾ ಮಾಣಿಕೇಶ್ವರಿ ಕಾಲೋನಿಯ ನಿವಾಸಿ ಕೃಷ್ಣಾ ತಂದೆ ಗುಂಡಪ್ಪನು ನನಗೆ ಕೆಲಸ ಕೊಡಿಸುವುದಾಗಿ ಹೇಳಿ ಹಣದ ಆಸೆ ತೋರಿಸಿ ಇಷ್ಟವಿಲ್ಲದಿದ್ದರೂ ಸಹ ಒತ್ತಾಯಪೂರ್ವಕವಾಗಿ ವೇಶ್ಯಾವಾಟಿಕೆ ದಂಧಗೆ ತಳ್ಳಿದ್ದರು ಎಂದು ನೊಂದ ಮಹಿಳೆ ಹೇಳಿದರು. ನಂತರ ಪೋಲಿಸರು ವಿಚಾರಣೆ ತೀವ್ರಗೊಳಿಸಿದಾಗ ಮ್ಯಾನೇಜರ್ ಕೃಷ್ಣಾ ತಂದೆ ಗುಂಡಪ್ಪ ನಾಯ್ಕೋಡಿಯು ಲಾಡ್ಜ್ನ ಮಾಲಿಕ ರಾಮಚಂದ್ರ ನಾಯ್ಕ್ ಎಂದು ಹೇಳಿದ.

ಅದೇ ರೀತಿ ಕೌಂಟರ್ ಪಕ್ಕದಲ್ಲಿ ಇಬ್ಬರು ಮಹಿಳೆಯರು ಇದ್ದು, ಅವರನ್ನು ವಿಚಾರಿಸಿದಾಗ ಒಬ್ಬ ಮಹಿಳೆ ಹೈದ್ರಾಬಾದ್ ತೆಲಂಗಾಣ ಮತ್ತು ಮಹಾರಾಷ್ಟçದ ಲಾತೂರಿನ ಇನ್ನೋರ್ವ ಮಹಿಳೆಯು ಪತ್ತೆಯಾಗಿದ್ದು, ಕೃಷ್ಣಾ ತಂದೆ ಗುಂಡಪ್ಪ ಅವರು ಹಣದ ಆಸೆ ತೋರಿಸಿ ಒತ್ತಾಯಪೂರ್ವಕವಾಗಿ ತಮಗೆ ವೇಶ್ಯಾವಾಟಿಕೆ ದಂಧಗೆ ತಳ್ಳಿದ್ದರು ಎಂದು ಪೋಲಿಸರಿಗೆ ಹೇಳಿದರು. ಈ ಕುರಿತು ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Share This Article
Leave a Comment