ಪರಿಷತ್‌ನಲ್ಲಿ ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಗೆಲುವು: ಬಿಜೆಪಿ ವಿಜಯೋತ್ಸವ

 

ಕಲಬುರ್ಗಿ, ಜೂ.೧೯- ನಿನ್ನೆ ಜರುಗಿದ ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಪಕ್ಷದ ಓಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ರಘು ಕೌಟಿಲ್ಯ, ಪಕ್ಷದ ಶಿಸ್ತು ಸಮಿತಿಯ ರಾಜ್ಯಾಧ್ಯಕ್ಷ ಲಿಂಗರಾಜ್ ಪಾಟೀಲ್ ಹಾಗೂ ರಾಜ್ಯಸಭೆಗೆ ನಾಗರಾಜ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ವಿಜಯೋತ್ಸವದಲ್ಲಿ ಅವ್ವಣ್ಣ ಮ್ಯಾಕೇರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ಅಂಬಾರಾಯ್ ಅಷ್ಟಗಿ, ಓಬಿಸಿ ನಗರ ಘಟಕದ ಅಧ್ಯಕ್ಷ ದೇವಿಂದ್ರ ದೇಸಾಯಿಕಲ್ಲೂರ್, ಸಂತೋಷ್ ಹಾದಿಮನಿ, ಧರ್ಮಣ್ಣ ಇಟಗಾ, ಬಸವರಾಜ್ ಸಪ್ಪಣಗೋಳ್ ಮುಂತಾದವರು ಪಾಲ್ಗೊಂಡಿದ್ದರು.

Share This Article
Leave a Comment