ಪುರಸ್ಕøತ ಪ್ರಧಾನಮಂತ್ರಿ ಅವಾಸ್ ಯೋಜನೆ 2.0 ಯೋಜನೆಯಡಿ ಅಫಜಲಪೂರ ಪುರಸಭೆಯ ವ್ಯಾಪ್ತಿಯಲ್ಲಿನ ವಸತಿ ರಹಿತ, ನಿವೇಶನ ರಹಿತ (ಕಚ್ಚಾ ಮನೆ ಹೊಂದಿರುವ) ಕುಟುಂಬಗಳಿಂದ ಮನೆ ಕಟ್ಟಡ ಸಹಾಯಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2026ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಅಫಜಲಪುರ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಫಜಲಪುರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡಗಳಲ್ಲಿನ ವಸತಿ ರಹಿತ (ಕಚ್ಚಾ ಮನೆ ಹೊಂದಿರುವ) ಮತ್ತು ನಿವೇಶನ ರಹಿತ ಅರ್ಹ ಫಲಾನುಭವಿಗಳು ನಿವೇಶನ ಹೊಂದಿದ ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಹಕ್ಕುಪತ್ರ/ಕ್ರಯಪತ್ರ/ದಾನಪತ್ರ/ ಉಡುಗೊರೆ ಪತ್ರ/ಖಾತಾ ಪತ್ರಗಳಲ್ಲಿ ಯಾವುದಾದರು ದಾಖಲೆಯನ್ನು ಹೊಂದಿರಬೇಕು) (ಬಿ.ಎಲ್.ಸಿ.), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ.), ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್.), ಬಡ್ಡಿ ಸಹಾಯಧನ ವಸತಿ ಯೋಜನೆ (ಐ.ಎಸ್.ಎಸ್.) ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದ https//pmay.urban.govt.in ಪೋರ್ಟಲ್‍ದಲ್ಲಿ 2026ರ ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಮಹಿಳಾ ಫಲಾನುಭವಿಗಳಿಗೆ ಆದತ್ಯೆ ನೀಡಲಾಗುತ್ತಿದ್ದು, ಇಚ್ಛೆಯುಳ್ಳ ಫಲಾನುಭವಿಗಳು 2026ರ ಜೂನ್ 30 ರೊಳಗಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅಫಜಲಪುರ ಪುರಸಭೆ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಫಜಲಪುರ ಪುರಸಭೆ ಕಾರ್ಯಾಲಯದ ವಸತಿ ಶಾಖೆಯ ಸಿಬ್ಬಂದಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.