ಕಲಬುರ್ಗಿ, ಮೇ.೧೩- ವೈದ್ಯರ ಚಿಕಿತ್ಸೆಯ ಜೊತೆಗೆ ದಾದಿಯರ ನಿಸ್ವಾರ್ಥ ಸೇವೆ ರೋಗಿ ಗಳನ್ನು ಬೇಗ ಗುಣಮುಖರಾಗಿಸುತ್ತದೆ ಎಂದು ಕೆಬಿಎನ ವಿಶ್ವ ವಿದ್ಯಾಲಯದ ಸಮ ಉಪಕುಲಪತಿ ಪ್ರೊ. ಅಶಫಾಕ್ ಅಹ್ಮದ್ ಅವರು ಹೇಳಿದರು.
ಮಂಗಳವಾರ ಕೆಬಿಎನ್. ಟೀಚಿಂಗ್ ಮತ್ತು ಜನರಲ್ ಆಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಫ್ಲೋರೆನ್ಸ್ ನೈಟ್ಯಾನಂಗಲ ಅವರ ಜನ್ಮದಿನ ದಂದು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ಅವರೆಲ್ಲ ಆಸ್ಪತ್ರೆಯ ಬೆನ್ನೆಲುಬು. ಅವರ ಸಹನೆ ಮತ್ತು ತಾಳ್ಮೆಗೆ ಅಭಿನಂದನೆಗಳು ಎಂದರು. ಅವರು ಸಲ್ಲಿಸಿತ್ತಿರುವ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅವರು ಕೆಬಿಎನ ಆಸ್ಪತ್ರೆಯ ಎಲ್ಲ ದಾದಿಯರಿಗೆ ಪ್ರತಿಜ್ಞೆ ಯನ್ನು ಬೋಧಿಸಿದರು. ನಂತರ ಕೇಕ್ ಕತ್ತರಿಸಿ ಸಂಭ್ರಮೀಸಲಾಯಿತು. ಮೆಡಿಕಲ್ ಡೀನ್ ಡಾ. ಗುರುಪ್ರಸಾದ್, ಮೆಡಿಕಲ್ ಸುಪ್ರಿಂಟೆAಡೆAಟ್ ಡಾ ಸಿದ್ದಲಿಂಗ ಚೆಂಗಟಿ, ಆಡಳಿತ ಅಧಿಕಾರಿ ಡಾ. ರಾಧಿಕಾ ಮುಂತಾದವರು ಉಪಸ್ಥಿತರಿದ್ದರು.