ಕೇಂದ್ರ ಸಂಪುಟ ಬಂದರೂ ಬಂಗಾಳ ಗೆಲ್ಲಲಾಗದು: ಮಮತಾ ಬ್ಯಾನರ್ಜಿ.

 

ಕೋಲ್ಕತ್ತಾ: ‘ಪಶ್ಚಿಮ ಬಂಗಾಳದಲ್ಲಿ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಪ್ರಧಾನಿ, ಗೃಹ ಸಚಿವರು ಸೇರಿದಂತೆ ಇಡೀ ಕೇಂದ್ರ ಸಂಪುಟವನ್ನೇ ಬಿಜೆಪಿ ನಿಯೋಜಿಸಿದೆ. ಜೊತೆಗೆ ಎನ್‌ಡಿಎ ಆಡಳಿತದ 19 ರಾಜ್ಯಗಳ ಮುಖ್ಯಮಂತ್ರಿಗಳೂ ಪ್ರಚಾರಕ್ಕೆ ಇಳಿದಿದ್ದಾರೆ. ಆದರೆ ಈ ಎಲ್ಲಾ ಆರ್ಭಟಗಳು ಮೇ 4ರಂದು ನೆಲಕಚ್ಚಲಿವೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಹೇಳಿದರು.

ಹೂಗ್ಲಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಸುಮಾರು 50 ಹೆಲಿಕಾಪ್ಟರ್‌ಗಳು ಪಶ್ಚಿಮ ಬಂಗಾಳಕ್ಕೆ ಬಂದಿಳಿದಿವೆ. ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ಸೇರಿದಂತೆ ಇಡೀ ಕೇಂದ್ರ ಸಂಪುಟವೇ ಇಲ್ಲಿ ಪ್ರಚಾರಕ್ಕೆ ಬಂದಿದೆ. ಆದರೆ ಟಿಎಂಸಿ ಪಕ್ಷವು ಕೇವಲ ಮೂರು ಹೆಲಿಕಾಪ್ಟರ್‌ಗಳ ಮೂಲಕ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿದೆ’ ಎಂದರು.

ಇನ್ನೂ ಮಾತನಾಡಿದ ಅವರು, ‘ಹೋಗುವ ಎಲ್ಲೆಡೆ ಕೇಂದ್ರ ಪಡೆಗಳು ಕಾಣಿಸುತ್ತಿವೆ. ಶಸ್ತ್ರಸಜ್ಜಿತ ವಾಹನಗಳನ್ನೂ ರಾಜ್ಯಕ್ಕೆ ತಂದಿದ್ದಾರೆ. ಆದರೆ ಅವುಗಳನ್ನು ಅಗತ್ಯವಿರುವ ಸ್ಥಳಗಳಲ್ಲಿ ಸರಿಯಾಗಿ ನಿಯೋಜಿಸಲಾಗುತ್ತಿಲ್ಲ’ ಎಂದು ಟೀಕಿಸಿದರು.

Share This Article
Leave a Comment